ಇತ್ತೀಚಿನ ಸುದ್ದಿ
Kasaragod | ಮಣಿಯಂಪಾರೆ ಚರ್ಚ್ ನಲ್ಲಿ ಮೊಂತಿ ಹಬ್ಬದ ನೊವೇನಾ ಪ್ರಾರ್ಥನೆ ಆರಂಭ
30/08/2025, 18:37

ಕಾಸರಗೋಡು(reporterkarnataka.com): ಕಾಸರಗೋಡು ಜಿಲ್ಲೆಯ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚ್ ನಲ್ಲಿ ಸೆಪ್ಟೆಂಬರ್ 8ರಂದು ನಡೆಯಲಿರುವ ಮೊಂತಿ ಹಬ್ಬದ ಪೂರ್ವಭಾವಿಯಾಗಿ 9 ದಿನಗಳ ನೊವೇನಾ ಪ್ರಾರ್ಥನೆ ಆಗಸ್ಟ್ 30ರಂದು ಆರಂಭಗೊಂಡಿದೆ.
ಚರ್ಚಿನ ಧರ್ಮಗುರು ವಂದನೀಯ ಫಾ. ನೆಲ್ಸನ್ ದಲ್ಮೆಡಾ ಅವರ ನೊವೇನಾ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೇರಿ ಮಾತೆ ಕೇವಲ ಯೇಸು ಕ್ರಿಸ್ತರ ತಾಯಿ ಆಗಿರದೆ ನಮ್ಮೆಲ್ಲರ ತಾಯಿ ಆಗಿದ್ದಾರೆ.
ಅವರಿಗೆ ಗೌರವ ನಮನ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಚರ್ಚ್ ಉಪಾಧ್ಯಕ್ಷ ವಿಲ್ಸನ್ ಡಿ ಸೋಜಾ ಉಪಸ್ಥಿತರಿದ್ದರು.
ಚರ್ಚಿನ ಮಕ್ಕಳು ಮತ್ತು ಭಕ್ತರು ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿ ಪ್ರಾರ್ಥಿಸಿದರು.