ಇತ್ತೀಚಿನ ಸುದ್ದಿ
ಕಾರುಣ್ಯ ನೆಲೆ ವೃದ್ದಾಶ್ರಮದ ಮಾದಯ್ಯ ಗುರುವಿನ್ ತುರ್ವಿಹಾಳ ಅವರ ಆರೋಗ್ಯಕ್ಕೆ ಸಾಮೂಹಿಕ ಪ್ರಾರ್ಥನೆ
30/05/2021, 16:02

ಸಿಂಧನೂರು(reporterkarnataka news):
ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮದಲ್ಲಿ ಶ್ರೀ ಮಾದಯ್ಯ ಗುರುವಿನ್ ತುರ್ವಿಹಾಳ ಅವರಿಗೆ ಕೋವಿಡ್-19ದೃಢಪಟ್ಟು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ವಾಗಿ ಗುಣಮುಖರಾಗಲೆಂದು ಹಾರೈಸಲಾಯಿತು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ ಕೆ. ವಿರೂಪಾಕ್ಷಪ್ಪ ಶ್ರೀಮತಿ ಕೆ.ಕಮಲಮ್ಮ ಜನಕಲ್ಯಾಣ ಫೌಂಡೇಷನ್
ವತಿಯಿಂದ ಬೆಳಗಿನ ಉಪಹಾರ ವ್ಯವಸ್ಥೆ ಮಾಡಿ ಕೊರೊನ ಹಿನ್ನೆಲೆಯಲ್ಲಿ ಎಲ್ಲಾ ವೃದ್ಧರಿಗೆ ಮತ್ತು ಬುದ್ದಿಮಾಂದ್ಯರಿಗೆ “ಮಾಸ್ಕ್ ಮತ್ತು ಸ್ಯಾನಿ ಟೈಜರ್ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಿದರು.
ಎಂ. ದೊಡ್ಡಬಸವರಾಜ ( ಅಧ್ಯಕ್ಷರು ಪಿ.ಎಲ್.ಡಿ ಬ್ಯಾಂಕ್), ಶರಣು. ಪಾ. ಹಿರೇಮಠ, ಪೂಜಪ್ಪ ಪೂಜಾರಿ (ಅಧ್ಯಕ್ಷರು, ತಾಲೂಕ ಕುರುಬ ಸಮಾಜ ಸಿಂಧನೂರು) ಎಂ.ಎಸ್.ಶ್ರೀನಿವಾಸ, ಮಹೇಶ ಸೌದ್ರಿ , ಚೈತ್ರಾ ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.