1:39 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕರ್ನಾಟಕ ಸ್ಟೈಲ್ ಐಕಾನ್ 2021 ಸ್ಪರ್ಧೆ: ವಿಜಯಪುರದ ದೀಕ್ಷಾ ಸೆಕೆಂಡ್ ರನ್ನರ್ ಅಪ್ 

03/12/2021, 14:08

ವಿಜಯಪುರ(reporterkarnataka.com): ಫ್ಯಾಶನ್ ಪ್ಯಾರಿಸ್ ನಲ್ಲಿ ಹುಟ್ಟಿದ್ರೆ ವಿಜಯಪುರದಲ್ಲಿ ಕೊನೆಗೊಳ್ಳುತ್ತದೆ ಎಂಬ ಕುಹಕದ ಮಾತಿತ್ತು. ಆದರೆ ಈ ಮಾತನ್ನು ಬುಡಮೇಲು ಮಾಡಲಾಗಿದೆ. ವಿಜಯಪುರದ ದೀಕ್ಷಾ ಭೀಸೆ ಅವರು ಕರ್ನಾಟಕ ಸ್ಟೈಲ್ ಐಕಾನ್ 2021ರ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.


ಮುಂಬೈನ ಬೋರೆಗಾಂವನಲ್ಲಿ ನಡೆದ ಮಿಸ್ ಕರ್ನಾಟಕ ಸ್ಟೈಲ್ ಐಕಾನ್ 2021ರಲ್ಲಿ ವಿಜಯಪುರದ ದೀಕ್ಷಾ ಭೀಸೆರವರು ಪಾಲ್ಗೊಂಡಿದ್ದರು. ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಇದೀಗ ಅವರು ಪ್ರಶಸ್ತಿ ಬಾಚಿಕೊಂಡು ವಿಜಯಪುರ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.

ಸುಮಾರು ಒಂದು ವಾರಗಳ ತರಬೇತಿಯ ನಂತರ ಆತ್ಮವಿಶ್ವಾಸದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ ದೀಕ್ಷಾ ಭೀಸೆರವರು ನಡೆ-ನುಡಿ-ಭಾವ ಶುದ್ಧತೆಯಲ್ಲಿ ಎಲ್ಲರ ಮನಗೆದ್ದರು. ದಕ್ಷಿಣ ಕರ್ನಾಟಕ ಮತ್ತು
ಮುಂಬೈ ವಲಸಿಗ ಕನ್ನಡಿಗರೇ ತುಂಬಿದ್ದ.ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವುದು ಕನಸಿನ ಮಾತು. ಆದರೆ ದೀಕ್ಷಾ.ಭೀಸೆರವರು ಸಾಧನೆ ಮಾಡಿ ಇದೀಗ ನಾಡಿನ ಗಮನ ಸೆಳೆದಿದ್ದಾರೆ. ಉತ್ತರ ಕರ್ನಾಟಕದ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

ಪ್ರಶಸ್ತಿ ಪಡೆದ ಬಳಿಕ ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ದೀಕ್ಷಾ ಅವರು “ನಮ್ಮ ಭಾಗದ ಹೆಣ್ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸೋದು ತುಂಬಾ ವಿರಳ. ಹೆಣ್ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು