ಇತ್ತೀಚಿನ ಸುದ್ದಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆಗೆ ಪ್ರತಿಷ್ಠಿತ ಸಿದ್ದಗಂಗಾ ಸೇವಾ ರತ್ನ ಪ್ರಶಸ್ತಿ ಪ್ರದಾನ
24/01/2026, 13:35
ಬಳ್ಳಾರಿ(reporterkarnataka.com): ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರಿಗೆ ಬಳ್ಳಾರಿಯಲ್ಲಿ ಸಿದ್ದಗಂಗಾ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮನ್ ಡಿ. ಪನ್ನೇಕರ್ ಪ್ರಶಸ್ತಿ ಪ್ರದಾನ ಮಾಡಿದರು. ಪರಮಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸ್ಮರಣಾರ್ಥ ಅಂಗವಾಗಿ ದಾಸೋಹ ದಿನದ ಸ್ಮರಣೆಯಲ್ಲಿ ಬಳ್ಳಾರಿ ನಗರದ ವಿಮ್ಸ್ ಆವರಣದಲ್ಲಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಒಂದು ಸಾವಿರ ಮಂದಿ ಸಾರ್ವಜನಿಕರಿಗಾಗಿ ದಾಸೋಹದಲ್ಲಿ ಕೇಸರಿಬಾತ್, ಪಲಾವ್ ಹಾಗೂ ಕೂರ್ಮವನ್ನು ವಿತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಎಸ್ಪಿ ಸಮನ್ ಡಿ. ಪನ್ನೇಕರ್ ನೆರವೇರಿಸಿದರು. ಬಳ್ಳಾರಿ ಮಹಾನಗರಪಾಲಿಕೆ ಮೇಯರ್ ಪಿ.ಗಾದೆಪ್ಪ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಪತ್ರಕರ್ತರಾದ ಮಂಜುನಾಥ, ರಾಜ್ಯ ಉಪಾಧ್ಯಕ್ಷರಾದ ಎಂ.ಇಸಾಕ್, ಕಾಂಗ್ರೆಸ್ ಮುಖಂಡರಾದ ಕಂಕೂರು ರಾಮುಡು, ಕೆಪಿಟಿಸಿಎಲ್ ಎನ್.ಶ್ರೀನಿವಾಸ ಉಪ್ಪುಂದ ಉಪಸ್ಥಿತರಿದ್ದರು.
ಎಸ್ಪಿ ಸಮನ ಡಿ.ಪನ್ನೇಕರ್ ರವರಿಂದ ಪ್ರತಿಷ್ಠಿತ ಸಿದ್ದಗಂಗಾ ಸೇವಾ ರತ್ನ ಪ್ರಶಸ್ತಿ ಯನ್ನು ಬಂಗ್ಲೆ ಮಲ್ಲಿಕಾರ್ಜುನ ಸ್ವೀಕರಿಸಿದರು.












