10:52 PM Monday25 - November 2024
ಬ್ರೇಕಿಂಗ್ ನ್ಯೂಸ್
ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ…

ಇತ್ತೀಚಿನ ಸುದ್ದಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನಾ ವತಿಯಿಂದ ಮುಖ್ಯಮಂತ್ರಿಗಳಿಗೆ ರಕ್ತದಲ್ಲಿ ಸಹಿ ಮಾಡಿದ ಮನವಿ ಪತ್ರ

06/10/2023, 21:54

ರಾಯಚೂರು(reporterkarnataka.com): ಜಿಲ್ಲೆಯ ಮಸ್ಕಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಎಂ. ಸುಕನ್ಯ ಅವರ ನೇತೃತ್ವದಲ್ಲಿ ರಕ್ತದಲ್ಲಿ ಪತ್ರ ಬರೆದು ಪತ್ರಕರ್ತರ ಬೇಡಿಕೆ ಈಡೇರಿಸುವಂತೆ ರಕ್ತದಲ್ಲಿ ಪತ್ರ ಸೈನ್ ಮಾಡಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಗೆ ಕೊಡಲಾಯಿತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕಾನಿಪ ಧ್ವನಿ ಸಂಘಟನಾ ವತಿಯಿಂದ ಮೂಲಭೂತ ಸೌಕರ್ಯ ದಿಂದ ವಂಚಿತರಾಗಿರುವ ರಾಜ್ಯದ ಪತ್ರಕರ್ತರ ಪರವಾಗಿ ರಾಜ್ಯಾದ್ಯಂತ ಕಾನಿಪ ಧ್ವನಿ ತಾಲೂಕು ಘಟಕದ ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು, ಸದಸ್ಯರುಗಳ ರಕ್ತದಿಂದ ಸಹಿ ಮಾಡಿರುವ ಬಹಿರಂಗ ಪತ್ರದ ಜೊತೆಗೆ ಕೆಲ ಪ್ರಮುಖ ಮನವಿಗಳನ್ನು ಮಾಡಲಾಯಿತು.

ಮಾಧ್ಯಮ ಕ್ಷೇತ್ರದಲ್ಲಿ ಎಂದಿಗೂ ಈ ರೀತಿಯ ರಕ್ತದಿಂದ ಸಹಿ ಮಾಡಿರುವುದು ಚರಿತ್ರೆಯಲ್ಲಿಯೇ ಇಲ್ಲ. ಇದು ಕಾನಿಪ ಧ್ವನಿ ಸಂಘಟನೆಯ ಒಂದು ಕಹಿ ಘಟನೆ ಮತ್ತು ಇತಿಹಾಸವನ್ನು ಸೃಷ್ಟಿ ಮಾಡಿದ ಪ್ರಮುಖ ವಿಷಯವಾಗಿದೆ.
ಸರ್ಕಾರದ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಆದರೂ ನಮ್ಮ ಸಿದ್ದರಾಮಯ್ಯನವರಿಗೆ ಗೊತ್ತಾಗದಿರುವುದು ವಿಷಾಧಕರವಾಗಿದೆ. ಒಂದುವರೆ ವರ್ಷದಿಂದ ಎಷ್ಟೇ ಹೋರಾಟ ಮಾಡಿದರೂ ಸಿದ್ದರಾಮಯ್ಯನವರು ಮಾಧ್ಯಮ ವರ್ಗದವರಿಗೆ ಸ್ಪಂದಿಸುತ್ತಿಲ್ಲ ಯಾಕೆ? ಆದರೆ ರಾಜ್ಯಾದ್ಯಂತ ಮನೆಯಲ್ಲಿರುವ ಮಹಿಳೆಯರಿಗೆ ಮತ್ತು ಮಂಗಳಮುಖಿಯರಿಗೆ ಸೌಲಭ್ಯಗಳನ್ನು ಕೊಟ್ಟಿರುವುದು ಸ್ವಾಗತ. ಆದರೆ ರಾಜ್ಯಾದ್ಯಂತ ತನ್ನ ಪ್ರಾಣದ ಹಂಗನ್ನು ತೊರೆದು ಹಗಲು ರಾತ್ರಿ ಎನ್ನದೆ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯ ಜೊತೆಗೆ ಭ್ರಷ್ಟಾಚಾರ ಬಯಲು ಮಾಡುವುದರಲ್ಲಿ ಪತ್ರಕರ್ತನ ಪಾತ್ರ ಪ್ರಮುಖವಾಗಿದ್ದರು ಸಹ ನೀವು ಏಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ……..,?
ಸರ್ಕಾರ ಮಾಧ್ಯಮ ವರ್ಗದವರಿಗೆ ಎಲ್ಲಾ ಸವಲತ್ತುಗಳನ್ನು ಕೊಡುತ್ತಿದೆ ಎಂದು ನ್ಯಾಯಾಂಗ ವ್ಯವಸ್ಥೆ ತಿಳಿದುಕೊಂಡಿದೆ. ಆದರೆ ದುರದೃಷ್ಟವಶಾತ್ ರಾಜ್ಯಾದ್ಯಂತ ಸುಮಾರು ಪತ್ರಕರ್ತರು ಎಲ್ಲ ಸವಲತ್ತುಗಳಿಂದ ವಂಚಿತರಾಗಿ ಇವತ್ತು ತನ್ನ ಕುಟುಂಬ ಬೀದಿ ಪಾಲಾಗಿದೆ ಮತ್ತು ಪತ್ರಕರ್ತರು ತನ್ನ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲಾಗದೆ ಕಂಗಾಲಾಗಿದ್ದಾರೆ. ಅದರಿಂದ ಇವತ್ತು ಈ ಹೋರಾಟದಿಂದ ನ್ಯಾಯಾಂಗದ ಕಣ್ಣನು ತೆರೆಸುತ್ತೇನೆ ಎಂಬ ಪ್ರಬಲವಾದ ಧ್ವನಿ ಎತ್ತಿದ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಸ್ಥಾಪಕರಾಗಿರುವ ಮಲ್ಲಿಕಾರ್ಜುನ್ ಬಂಗ್ಲರವರು ತಿಳಿಸಿದ್ದಾರೆ.
ಅಕ್ರಿಡೇಶನ್ ನೆಪದಲ್ಲಿ ತಾರತಮ್ಯ ಮಾಡುತ್ತಾ ಒಂದು ದೊಡ್ಡ ಪತ್ರಿಕೆಗೆ ಒಬ್ಬರಿಗೆ ಕೊಡುತ್ತಿದ್ದಾರೆ.ಇದು ಅಕ್ಷಮ್ಯ ಅಪರಾಧ ಕಾನೂನಿನ ಮುಖಾಂತರ ಇತಿಹಾಸದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿನೂತನ ಶಕ್ತಿಯಾಗಿ ಹೊರ ಹೋಗುತ್ತದೆ. ಇಷ್ಟೆಲ್ಲ ಹೋರಾಟ ಆಗುತ್ತಿದ್ದರು ಸಿದ್ದರಾಮಯ್ಯನವರಿಗೆ ಸಾಮಾನ್ಯ ಜನರಲ್ಲಿ ಇರುವ ಕಾಳಜಿ ಪತ್ರಕರ್ತರ ಮೇಲೆ ಯಾಕಿಲ್ಲ…..? ಇದೆಲ್ಲಾ ಬೂಟಾಟಿಕೆಯ ಸಾಮಾಜಿಕ ಹರಿಕಾರತನನೇ. ಸ್ವಾತಂತ್ರ್ಯ ಬಂದು 77 ವರ್ಷಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ ಇದುವರೆಗೂ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದರೆ 90% ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳು ಸರ್ಕಾರದಿಂದ ಆಗುವ ಪತ್ರಿಕೆ ನಡೆಸುವ ಬಂಡವಾಳಶಾಹಿಗಳಿಂದ ಮರೀಚಿಕೆಯಾಗಿರುವುದು ನೋವಿನ ಸಂಗತಿ ಆಗಿದೆ.
ಸರ್ಕಾರದ ಕೈಯಲ್ಲಿರುವ ಕಾರ್ಮಿಕ ಇಲಾಖೆಯು ಕೂಡ ಇದ್ದು ಇಲ್ಲದಂತಾಗಿರುವ ಪರಿಸ್ಥಿತಿಯನ್ನು ವರದಿಗಾರರು ಪ್ರಸ್ತುತ ರಾಜ್ಯದಲ್ಲಿ ಅನುಭವಿಸುತ್ತಿದ್ದಾರೆ. ವಾರ್ತಾ ಇಲಾಖೆಯ ಮಧ್ಯಮ ಪಟ್ಟಿಯಲ್ಲಿರುವ 800 ಪತ್ರಿಕೆಗಳು ಇದುವರೆಗೂ ಕಾರ್ಮಿಕ ಇಲಾಖೆಗಳಿಗೆ ಒಳಪಡದೆ ನೋಂದಣಿಯಾಗದೆ ಆಯಾ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ (ವರದಿಗಾರರಿಗೆ) ಕಾರ್ಮಿಕರಿಗೆ FP, ESI, ಪೇಸ್ಲಿಫೆ, ವಾರದ ರಜೆ, ವಿಡಿಯೋ ಕಿಟ್ ಹಾಗೂ ಇನ್ನಿತರ ಸೌಲಭ್ಯಗಳಿಂದ ಇಂದಿನವರೆಗೂ ವಂಚಿತವಾಗಿರುವುದಕ್ಕೆ ಸರ್ಕಾರದ ಮೃದು ಧೋರಣೆಯೇ ಈ ಸ್ಥಿತಿಗೆ ಕಾರಣ. ಇನ್ನು ಮುಂದಾದರು ಸರ್ಕಾರ ಎತ್ತುಕೊಂಡು ಪತ್ರಿಕೆ ನಡೆಸುವ ಬಂಡವಾಳಶಾಹಿಗಳ ಮೇಲೆ ಕಠಿಣ ನಿಲುವನ್ನು ತಾಳಿ ಕಾರ್ಮಿಕ ಇಲಾಖೆಗೆ ನೋಂದಾಣಿಯಾಗುವಂತೆ ಕ್ರಮ ಕೈಗೊಂಡರೆ ನಾಡಿನ 10,000 ಮೇಲ್ಪಟ್ಟ ವರದಿಗಾರರ ಜೀವನ ಹಾಸನವಾಗುವುದರ ಜೊತೆಗೆ ಪ್ರತಿಯೊಬ್ಬ ವರದಿಗಾರರ ಕುಟುಂಬದಲ್ಲಿ ಮಂದಹಾಸ ಜೊತೆಗೆ ತಮ್ಮನ್ನು ನಾಡಿನ ಪತ್ರಕರ್ತರು”ಮಾಧ್ಯಮ ರಾಮಯ್ಯ”ಎಂಬ ಕೊಂಡಾಡುವ ಕಾಲ ಸನ್ನಿ ಹಿತವಾಗಬಹುದು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ತಮ್ಮ ಅಧಿಕಾರ ಅವಧಿಯಲ್ಲಿ ನ್ಯಾಯ ಒದಗಿಸಿರುವ ತಾವುಗಳು 2023/24 ರ ಬಜೆಟ್ ನಲ್ಲಿ ನಲ್ಲಿ 52,000 ಕೋಟಿ ರೂಗಳ ಹಣವನ್ನು 5 ಗ್ಯಾರಂಟಿ ಗಳಿಗೆ ಮೀಸಲಿಸಿರುವ ತಾವುಗಳು ಅನೇಕ ವರ್ಷಗಳಿಂದ ಸಾರ್ವಜನಿಕರಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರು ಕೇವಲ 10000 ಮೇಲ್ಪಟ್ಟಿರುವ ಪತ್ರಕರ್ತರ ಬಗ್ಗೆ ತಮಗೆ ಯಾಕೆ ಉದಾಸೀನ ಎಂಬ ಪ್ರಶ್ನೆ ಪ್ರತಿಯೊಬ್ಬ ನಾಡಿನ ಪತ್ರಕರ್ತರಲ್ಲಿ ಕಾಡುತ್ತಿದೆ.
ಇನ್ನು ವಾರ್ತಾ ಇಲಾಖೆಯಲ್ಲಿ ಅಕ್ವಿಡೇಶನ್ ನೆಪದಲ್ಲಿ ತಾರತಮ್ಯ ಮಾಡುತ್ತಾ ಬಂಡವಾಳ ಶಾಹಿಗಳಿಗೆ ಮಣಿ ಹಾಕಿ ಮಾಲೀಕರಿಗೆ ಅವರ ಹೆಂಡತಿಗೆ ,ಮಕ್ಕಳಿಗೆ ಹಾಗೂ ಅಳಿಯಂದಿರಿಗೆ ಮೀಸಲಾಗಿರುವ ಅಕ್ರಿಡೇಶನ್ ಕಾರ್ಡ್ ಗಳು ಕೇವಲ 400 ಜನ ವರದಿಗಾರರಿಗೆ ಮಾತ್ರ ಮಾಧ್ಯಮ ಮಾನ್ಯತೆ ಕಾರ್ಡ್ ದೊರೆತಿದೆ. ಮಾನ್ಯತೆಯಲ್ಲಿ ಖಾಯಂ ನೇಮಕಾತಿ ಆದೇಶ ಹೊಂದಿ ಪೂರ್ಣಾವಧಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಮಾತ್ರ ಅಂತ ನಿಯಮ ವಿದ್ದರೂ ಈ ನಿಯಮವನ್ನು ಪ್ರಸ್ತುತ ಗಾಳಿಯ ತೋರಿ ಕಾಯಂ ನೇಮಕಾತಿ ಆದೇಶ ಇಲ್ಲದಂತವರಿಗೆ ಅಕ್ರಿಟೆಶನ್ ಒದಗಿಸಿರುವುದು ಅಕ್ಷಯ ಅಪರಾಧ.
ಖಾಯಂ ನೇಮಕಾತಿ ಆದೇಶ ನೀಡದೆ ವಂಚಿಸುವ ಬಂಡವಾಳಶಾಹಿಗಳು ಮುಂದಿನ ಮಾಸಾಶನಕ್ಕೂ ಇದು ಪತ್ರಕರ್ತರಿಗೆ ಮಾರಕವಾಗಿದ್ದರಿಂದ ಇಂದು ಕೇವಲ 178 ಜನ ಪತ್ರಕರ್ತರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ. ಸಾಮಾಜಿಕ ಭದ್ರತೆಯಡಿಯಲ್ಲಿ 52,000 ಕೋಟಿ ಗಳನ್ನು ಖರ್ಚು ಮಾಡಲು ಮುಂದಾಗಿ 5 ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಪ್ರಸ್ತುತ ನೀಡುತ್ತಿರುವ ತಮಗೆ ಪತ್ರಕರ್ತರ ಕೆಲ ಪ್ರಮುಖ ಬೇಡಿಕೆಗಳನ್ನು ಈಡೇರಿಸಿದಾಗ ಮಾತ್ರ ತಮ್ಮ ಸಾಮಾಜಿಕ ಹರಿಕಾರಕೊಂದು ಬೆಲೆ ಸಿಗುತ್ತದೆ ಜೊತೆಗೆ 14 ಬಾರಿ ದಾಖಲೆಯ ಬಜೆಟ್ ನಾಡಿನಲ್ಲಿ ಮಂಡಿಸಿರುವ ಆರ್ಥಿಕ ತಜ್ಞರಾಗಿರುವ ತಾವುಗಳು ಸಮಾಜದ ಹಾಗೂ ಸರ್ಕಾರಕ್ಕೆ ಕೈಗನ್ನಡಿಯಾಗಿರುವ ಪತ್ರಕರ್ತರ ನಾಡಿಮಿಡಿತ ಹಾಗೂ ಸಂಕಷ್ಟಗಳನ್ನು ಅರಿಯದೆ ಕೇವಲ ಬಂಡವಾಳಶಾಹಿಗಳ ಪರ ಸಾಗುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಯಕ್ಷ ಪ್ರಶ್ನೆಯೊಂದಿಗೆ ಈಗಲಾದರೂ ನಾಡಿನ ದೊರೆಯಾದ ತಾವುಗಳು ಪತ್ರಕರ್ತರ ಬಗ್ಗೆ ಹಾಗೂ ಚೌಕಟ್ಟಿನಲ್ಲಿ ನ್ಯಾಯ ಒದಗಿಸುತ್ತೀರಿ ಎಂಬ ಅಚಲನ ನಂಬಿಕೆಯೊಂದಿಗೆ ರಾಜ್ಯಾದ್ಯಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯಿಂದ ರಕ್ತದ ಮೂಲಕ ಸಲ್ಲಿಸಲಾಗಿದೆ.
ದಾವಣಗೆರೆ ಜಿಲ್ಲಾ ಘಟಕದಿಂದ ಅಪಾರ ಜಿಲ್ಲಾಧಿಕಾರಿಗಳಿಗೆ ರಕ್ತದ ಸಹಿ ಮುಖಾಂತರ ಡಾಕ್ಟರ್ ಬಿ ವಾಸುದೇವ್ ರಾಜ್ಯ ಉಪಾಧ್ಯಕ್ಷರು, ಜಿಹೆಚ್ ನಾಗರಾಜ್ ಜಿಲ್ಲಾಧ್ಯಕ್ಷರು ಮತ್ತು ಕಾನೂನು ಸಲಹೆಗಾರರು ಶಿವಶಂಕರ್, ಜಗದೀಶ್, ನವೀನ್ ಕುಮಾರ್. ಎಂ ಸುಕನ್ಯ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು