ಇತ್ತೀಚಿನ ಸುದ್ದಿ
Karnataka Bundh | ಪ್ರತಿಷ್ಠೆಗಾಗಿ ಅನಾವಶ್ಯಕ ಬಂದ್ ಕರೆ ಕೊಡಬಾರದು: ಮಾಜಿ ಗೃಹ ಆರಗ ಜ್ಞಾನೇಂದ್ರ
22/03/2025, 21:11

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಅನಾವಶ್ಯಕವಾಗಿ ಇವರ ಪ್ರತಿಷ್ಠೆಗಾಗಿ ಬಂದ್ ಕರೆ ಕೊಟ್ಟಿದ್ದಾರೆ. ಯಾರೋ ಎಲ್ಲೋ ಕುತ್ಕೊಂಡು ಮಾಡಿದರೆ ಆಗುತ್ತಾ? ಕರ್ನಾಟಕ ಬಂದ್ ಆಗುವುದಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.
ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಇವತ್ತು ಎಸ್ ಎಸ್ ಎಲ್ ಸಿ ಪರಿಕ್ಷೆ ಕೂಡ ಇದೆ. ಆ ರೀತಿ ಬಂದಾಗುವುದಿಲ್ಲ, ಆಗಬಾರದು ಕೂಡ. ಯಾರೋ ಪುಂಡರು ಮಾಡುವ ಕೆಲಸಕ್ಕೆ ನಮ್ಮ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆ ಯಾಕೆ ಕೊಡಬೇಕು.
ಬೆಳಗಾವಿಯಲ್ಲಿ ನಾಲ್ಕು ಜನ ಪುಂಡರು ಮಾಡಿರುವ ಕೆಲಸಕ್ಕೆ ಇಡೀ ಮರಾಠ ಸಮುದಾಯ ಮಾಡಿದೆ ಎಂದು ಹೇಳಲು ಆಗುವುದಿಲ್ಲ. ನಮ್ಮ ಕರ್ನಾಟಕದಲ್ಲಿ ಯಾವುದು ನಾಲ್ಕು ಜನ ಕೆಟ್ಟ ಕೆಲಸ ಮಾಡಿದರೆ ಇಡೀ ಕರ್ನಾಟಕ ಮಾಡಿದಂತಾಗುವುದಿಲ್ಲ. ಇದಕ್ಕೆ ಪೊಲೀಸ್ ಅವ್ರು ಆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರ, ಭಾರತ ಮತ್ತು ಪಾಕಿಸ್ತಾನವೇ? ಈ ರೀತಿಯ ಡಿವೈಡ್ ಅಂಡ್ ರೂಲ್ ಮಾಡಬಾರದು. ಯಾರನ್ನು ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಕೆಲಸ ಮಾಡಬಾರದು. ಯಾರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಅವರಿಗೆ ಎರಡು ರಾಜ್ಯವು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.