12:39 PM Sunday13 - April 2025
ಬ್ರೇಕಿಂಗ್ ನ್ಯೂಸ್
DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,…

ಇತ್ತೀಚಿನ ಸುದ್ದಿ

Karnataka BJP | ‘ಭೀಮ ಹೆಜ್ಜೆ’ ಸಂಭ್ರಮ ಆಚರಿಸದೆ ರಾಜ್ಯ ಸರಕಾರದಿಂದ ಅಂಬೇಡ್ಕರ್‌ಗೆ ಅವಮಾನ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪ

11/04/2025, 20:10

ಬೆಂಗಳೂರು(reporterkarnataka.com): ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಡೇಡ್ಕರ್‌ ಅವರ ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಕಾರ್ಯಕ್ರಮ ಆಚರಿಸದೆ ಅವಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಇಂದು “ಭೀಮ ಹೆಜ್ಜೆʼ ಶತಮಾನ ಸಂಭ್ರಮ ನಿಮಿತ್ತ ನಿಪ್ಪಾಣಿವರೆಗೆ ಏರ್ಪಡಿಸಿದ್ದ ಬೈಕ್‌ ಜಾಥಾಕ್ಕೆ ಚಾಲನೆ ನೀಡಿದ ವೇಳೆ ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಅಂಬೇಡ್ಕರ್‌ ಅವರಿಗೆ ಮತ್ತೂ ಅವಮಾನವನ್ನೇ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ ಅವರು ಸರ್ಕಾರದ ಗಮನ ಸೆಳೆದರೂ ರಾಜ್ಯ ಸರ್ಕಾರ “ಭೀಮ ಹೆಜ್ಜೆʼ ಶತಮಾನ ಸಂಭ್ರಮ ಆಚರಣೆಗೆ ಅನಾದಾರ ತೋರಿದೆ. ಅಂಬೇಡ್ಕರ್‌ ಮತ್ತು ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ನಿಜವಾದ ಗೌರವವೇ ಇಲ್ಲ. ಮೊನ್ನೆ ಕಾಂಗ್ರೆಸ್‌ ಸಮಾವೇಶದಲ್ಲಿ ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ದೇಶದ ಜನ ಗಮನಿಸಿದ್ದಾರೆ ಎಂದು ಚಾಟಿ ಬೀಸಿದರು.
ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ಕಾರಣಕ್ಕೆ “ನೂರು ವರ್ಷದ ಸಂಭ್ರಮʼ ಎಂಬ ನೆಪದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಅಧಿವೇಶನ ನಡೆಸಿಕೊಂಡಿತು. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ, ದಲಿತ ನಾಯಕ ಡಾ.ಅಂಬೇಡ್ಕರ್‌ ಅವರು ಬಂದು ಹೋದ ಸವಿ ನೆನಪಿಗೆ “ಭೀಮ ಹೆಜ್ಜೆʼ ಶತಮಾನದ ಸಂಭ್ರಮ ನಡೆಸಲು ಮುಂದಾಗಲಿಲ್ಲ ಏಕೆ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಮಹಾತ್ಮ ಗಾಂಧಿ ಶತಮಾನ ಸಂಭ್ರಮ ಸಮಾರಂಭವನ್ನೂ ಸರ್ಕಾರ ಅಚ್ಚುಕಟ್ಟಾಗಿ ಆಚರಿಸಲಿಲ್ಲ. ಬದಲಾಗಿ ಕಾಂಗ್ರೆಸ್‌ ಪಕ್ಷದ್ದೊಂದು ಅಧೀವೇಶನದ ರೀತಿ ನಡೆಸಿತು. ಈಗ ನೋಡಿದರೆ ಅದೇ ನಿಪ್ಪಾಣಿಗೆ ಅಂಬೇಡ್ಕರ್‌ ಬಂದು ಹೋದ ಸವಿನೆನಪಿಗೆ “ಭೀಮ ಹೆಜ್ಜೆʼ ಶತಮಾನ ಸಂಭ್ರಮ ಸಮಾರಂಭ ಆಯೋಜಿಸದೆ ಇಡೀ ದಲಿತ ಸಮುದಾಯವನ್ನೇ ಅವಮಾನಿಸಿದೆ ಎಂದು ಆರೋಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು