10:10 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Karnataka | ಬಂಡವಾಳ ಹೂಡಿಕೆಗೆ ಬಾಂಗ್ಲಾ ಉದ್ಯಮಿಗಳು ಆಸಕ್ತಿ: ಜವಳಿ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ಚರ್ಚೆ

11/06/2025, 21:32

ಬೆಂಗಳೂರು(reporterkarnataka.com): ಬಾಂಗ್ಲಾ ದೇಶದ ಜವಳಿ ಉದ್ಯಮಿಗಳು ಕರ್ನಾಟದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿದ್ದು ಬುಧವಾರ ಪೆಂಟಗಾನ್ ನಿಟ್ ಕಾಂನ ಬಿಪಿನ್ ಮುಂದ್ರಾ ಅವರು ಜವಳಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು.
ಪೆಂಟಗಾನ್ ನಿಟ್ ಕಾಂನ ಮಾಹಿತಿ ಪಡೆದ ಸಚಿವರು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದರೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಗ್ಗಾವಿಯಲ್ಲಿ ಯೂನಿಟ್ ಆರಂಭಿಸಬಹುದು ಎಂದು ಸಲಹೆ ನೀಡಿದರು.
ಈ ಮೂರೂ ಕಡೆ ಅಗತ್ಯ ಮೂಲ ಸೌಕರ್ಯಗಳಿವೆ. ಶಿಗ್ಗಾವಿಗೆ ವಿಮಾನ ಸಂಪರ್ಕ ಮತ್ತು ರೈಲ್ವೆ ಸಂಪರ್ಕ ಇದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಯೂನಿಟ್ ಆರಂಭಿಸಬಹುದು. ಇನ್ನೆರಡು ಸ್ಥಳಗಳು ರಾಜಧಾನಿಗೆ ಸಮೀಪದಲ್ಲಿವೆ. ಈ ಸ್ಥಳಗಳಿಗೆ ಭೇಟಿ ನೀಡಿ, ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ ಎಂದು ಸಚಿವರು ಸಲಹೆ ಮಾಡಿದರು.
ಪೆಂಟಗಾನ್ ನಿಟ್ಕಾಂ ಬಗ್ಗೆ ಮಾಹಿತಿ ಪಡೆದ ಸಚಿವರು, ಬಾಂಗ್ಲಾದಲ್ಲಿ ಅಲ್ಲಿನ ಸರ್ಕಾರ ಜವಳಿ ಉದ್ಯಮಕ್ಕೆ ಯಾವ ಯಾವ ಸೌಕರ್ಯ ಕಲ್ಪಿಸಿದೆ ಎಂಬ ವಿವರ ಪಡೆದರು. ಬಾಂಗ್ಲಾಗೆ ಹೋಲಿಕೆ ಮಾಡಿದರೆ ಕರ್ನಾಟಕ ಸರ್ಕಾರವೇ ಹೆಚ್ಚಿನ ಸೌಕರ್ಯ ಕಲ್ಪಿಸುತ್ತಿದೆ. ವಿದ್ಯುತ್ ಶುಲ್ಕ ಬಾಂಗ್ಲಾಗಿಂತ ಕರ್ನಾಟಕದಲ್ಲಿ ಕಡಿಮೆ ಇದೆ. ರಾಜ್ಯ ಸರ್ಕಾರ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಆಸಕ್ತಿ ಬಗ್ಗೆ ಕೇಳಿದ ಸಚಿವರು, ರಾಜ್ಯದಲ್ಲಿನ ಸ್ಥಳಗಳನ್ನು ಪರಿಶೀಲನೆ ಮಾಡಿ, ನಿಮಗೆ ಸೂಕ್ತ ಎನಿಸಿದ ಸ್ಥಳ ಆಯ್ಕೆ ಮಾಡಿಕೊಂಡರೆ ರಾಜ್ಯ ಸರ್ಕಾರ ಜವಳಿ ಘಟಕ ಆರಂಭಿಸಲು ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಪೆಂಟಗಾನ್ ನಿಟ್ ಕಾಂ ಬಗ್ಗೆ ಮಾಹಿತಿ ನೀಡಿದ ಮಾಲೀಕ ಬಿಪಿನ್ ಮುದ್ರಾ ಅವರು, ವಾರ್ಷೀಕ 13 ಸಾವಿರ ಮಿಲಿಯನ್ ಡಾಲರ್ ವಹಿವಾಟು ಹೊಂದಿದ್ದು, 1980ರಿಂದ ಜವಳಿ ಕ್ಷೇತ್ರದಲ್ಲಿದ್ದೇವೆ. ಉದ್ಯಮ ವಿಸ್ತರಣೆ ಉದ್ದೇಶದಿಂದ ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಭಿಲಾಷೆ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ಬಾಂಗ್ಲಾದಲ್ಲಿ ಪ್ರತಿ ಯೂನಿಟ್ ವಿದ್ಯುತ್ಗೆ ಒಂಭತ್ತು ರೂ. ಇದೆ. ಸದ್ಯದ ಪರಿಸ್ಥಿತಿ ಅಲ್ಲಿ ಜವಳಿ ಕ್ಷೇತ್ರಕ್ಕೆ ಪೂರಕ ವಾತಾವರಣ ಇಲ್ಲ. ಕರ್ನಾಟಕದ ನಂಟು ಇರುವ ಕಾರಣ ಇಲ್ಲಿ ಉದ್ಯಮ ಆರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಉದ್ಯಮ ಆರಂಭಿಸಲು ಆಸಕ್ತಿ ಇದೆ. ಏಕಗವಾಕ್ಷಿ ಪದ್ದತಿ ಇದ್ದರೆ ಅನುಕೂಲ, ಆಡಳಿತಾತ್ಮಕವಾಗಿ ವಿಳಂಬವಾಗದಿದ್ದರೆ ತ್ವರಿತವಾಗಿ ಬಂಡವಾಳ ಹೂಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಸ್ಟಿಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ರವೀಂದ್ರ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು