2:37 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕಾರ್ಕಳದ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಬಂಧಿತ ಇಬ್ಬರು ಆರೋಪಿಗಳಿಗೆ 4 ದಿನಗಳ ಪೊಲೀಸ್ ಕಸ್ಟಡಿ

25/08/2024, 21:28

ಕಾರ್ಕಳ(reporterkarnataka.com): ಕಾರ್ಕಳದಲ್ಲಿ ಹಿಂದೂ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 4 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಲಾಗಿದೆ.
ಆರೋಪಿಗಳಾದ ಅಲ್ತಾಫ್ ಹಾಗೂ ರಿಚಾರ್ಡ್ ಅವರನ್ನು ಪೋಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ನಗರ ಠಾಣಾ ಪೋಲೀಸರಿಗೆ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ವಿವಿಧ ಆಯಾಮಗಳಲ್ಲಿ ಆರೋಪಿಗಳ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿ ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
*ಮಸೀದಿಗೆ ಬರುವುದಿಲ್ಲ:* ಅಲ್ತಾಫ್ ಮಸೀದಿಗೆ ಬರುವುದೇ ಇಲ್ಲ . ನಮ್ಮ‌ ಸಮುದಾಯದ ಯಾವುದೇ ವಕೀಲರು ಅಲ್ತಾಫ್ ಪರವಾಗಿ ವಾದಿಸಬಾರದು ಎಂದು ಮುಸ್ಲಿಂ ಮುಖಂಡ ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.
ಅತ ಕಳೆದ ಹತ್ತು ವರ್ಷಗಳಿಂದ ಕಾರ್ಕಳದಲ್ಲಿ ನೆಲೆಸಿದ್ದು , ಟಿಪ್ಪರ್ ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ. ಆತ ಮೊದಲು ಕಾರ್ಕಳ ತಾಲೂಕಿನ ತೆಳ್ಳಾರು, ಬಳಿಕ ಪತ್ತೊಂಜಿಕಟ್ಟೆ,ನಂತರ ಬಂಗ್ಲೆಗುಡ್ಡೆ, ಈಗ ಕುಕ್ಕುಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಡುರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಎರಡು ಮಕ್ಕಳಿದ್ದು ಹೆಂಡತಿ ಹಾಗೂ ತಾಯಿ ಜೊತೆಗೆ ವಾಸವಾಗಿದ್ದ.

ಅರೋಪಿ ಕ್ಸೇವಿಯರ್ ರಿಚಾರ್ಡ್ ಸವೇರಾ ಅವರ ತಾಯಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಶುಕ್ರವಾರ ರಾತ್ರಿ 8.30 ರ ವೇಳೆಗೆ ಸವೇರಾ ಕಾರನ್ನು ಬಿಟ್ಟು ಬೈಕನಲ್ಲಿ ಮನೆಗೆ ಬಂದಿದ್ದ , ಕಾರು ಎಲ್ಲಿ ಎಂದು ಕೇಳಿದಾಗ ಉತ್ತರಿಸದೆ ಬಿಯರ್ ಕುಡಿದು ಮಲಗಿದ್ದು. ರಾತ್ರಿ 9-10 . ಗಂಟೆ ವೇಳೆಯಲ್ಲಿ ಬಾಗಿಲು ತೆರೆದಿಟಿದ್ದ ಸಮಯದಲ್ಲಿ ಪೋಲೀಸರು ಮನೆಗೆ ಬಂದು ಕಾರು ಎಲ್ಲಿದೆ ಕೇಳಿದಾಗ ಕನವರಿಸುತಿದ್ದ,ಪೋಲೀಸರು ಕಾರ್ ಅಫಘಾತಕ್ಕಿಡಾಗಿದೆ ಎಂದರು.
ಮಗ ಟಿಪ್ಪರ್‌ನಲ್ಲಿ ಕೆಲಸಮಾಡುತಿದ್ದಾನೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ . ,ಆದರೆ ಎಂದಿನಂತೆ ಮನೆಯಲ್ಲಿ ಎಲ್ಲರೊಂದಿಗೆ ಖುಷಿ ಯಿಂದ ಇರುತಿದ್ದ,ನಾವು ಎಂದಿಗೂ ಮಗನ ಮೇಲೆ ಸಂಶಯ ಪಟ್ಟಿಲ್ಲ. ಈ ವಿಚಾರ ಕಂಡು‌ ನನಗೆ ಆಘಾತವಾಗಿದೆ ಎಂದು,ನನ್ನ ಮಗನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಕಣ್ಣೀರು ಸುರಿಸಿದ್ದಾರೆ.
ಅತ್ಯಾಚಾರ ಆರೋಪಿ ಅಲ್ತಾಫ್ ತಾಯಿ ಆಯಿಷಾ
ಮಾತನಾಡಿದ್ದು ನಮ್ಮ ಊರು ತೀರ್ಥಹಳ್ಳಿ, ಮಗನಿಗೆ ಮದುವೆಯಾಗಿದ್ದು ಎರಡು ಮಕ್ಕಳಿದ್ದಾರೆ,ಆತ ಮರಳಿನ ವ್ಯಾಪಾರ ಮಾಡುತಿದ್ದಾನೆ. ನಿತ್ಯ ರಾತ್ರಿ 12 ಗಂಟೆಗೆ ಬರುತ್ತಾನೆ, ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ, ಪೊಲೀಸರು ನಮ್ಮ ಬಳಿ ಏನೂ ಹೇಳಿಲ್ಲ, ಪೊಲೀಸ್ ಸ್ಟೇಷನ್ ಗೆ ಹೋದಾಗ ಮತ್ತೆ ಬನ್ನಿ ಫೋನ್ ಮಾಡುತ್ತೇವೆ ಎಂದಿದ್ದಾರೆ,ಮಗನನ್ನು ಒಮ್ಮೆ ಬಿಡಿಸಿ ತರಬೇಕು, ಮಗ ಅತ್ಯಾಚಾರ ಮಾಡಿದ ಬಗ್ಗೆ ಏನು ಗೊತ್ತಿಲ್ಲ ಎಂದು ತಾಯಿ ಆಯೇಷಾ ಕಣ್ಣೀರು ಹಾಕಿದ್ದಾರೆ.


ಅಲ್ತಾಫ್ ಸಹೋದರ ಮಾಧ್ಯಮದೊಂದಿಗೆ ಮಾತನಾಡಿದ್ದು , ನನ್ನ ಅಣ್ಣ ನಿಗೆ ಯಾವುದೇ ದುಶ್ಚಟಗಳಿರಲಿಲ್ಲ, ಆತನ ಗೆಳೆಯರೆ ಒತ್ತಾಯ ಪೂರ್ವಕವಾಗಿ ಕಲಿಸಿಕೊಟ್ಟಿದ್ದಾರೆ , ಬೀಡಿ ಸಿಗರೇಟು ಸೇದುತ್ತಲು ಇರಲಿಲ್ಲ,ಮಾದಕ ದ್ರವ್ಯ ಸೇವನೆಯ ತೆಗೆದುಕೊಳ್ಳುವ ಬಗ್ಗೆ ನಮಗೆ ಗೊತ್ತಿಲ್ಲ, ಅಣ್ಣನ ಜೊತೆಗಿರುವವರೆ ಅತನನ್ನು ಹಾಳು‌ಮಾಡಿದ್ದಾರೆ , ತಮ್ಮನಾಗಿ ಹೇಳುತ್ತಿದ್ದೆನೆ ಅಲ್ತಾಫ್ ನಗೆ ಯಾವುದೇ ರೀತಿಯ ದುಶ್ಚಟಗಳಿರಲಿಲ್ಲ ಎಂದರು.

ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು: ಹಿಂದೂ ಯುವತಿ ಮೇಲಿನ‌ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿದೆ.ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಕಳ ಅತ್ಯಾಚಾರ ಪ್ರಕರಣದ ವಿರುದ್ಧ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು