5:43 PM Saturday22 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಕಾರ್ಕಳ:  ನಾಯಿಯನ್ನು ಬೆನ್ನಟ್ಟಿದ ಚಿರತೆ ಬಾವಿಗೆ; ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ರಕ್ಷಣೆ

10/04/2022, 13:07

ಕಾರ್ಕಳ(reporterkarnataka.com): ನಾಯಿಯನ್ನು ಓಡಿಸಿಕೊಂಡು ಹೋಗಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ ಕಸಬದ ಬಳಿ ಭಾನುವಾರ ಮುಂಜಾನೆ ನಡೆದಿದೆ.


ಕಸಬ ಸಮೀಪದ ಅತ್ತೂರು ವಿನ್ಸೆಂಟ್‌ ನವಿನ್  ಕ್ಯಾಸ್ಟೋಲಿನೊ ಎಂಬವರ ಮನೆಯ ಚಿರತೆ ಬಾವಿಗೆ ಬಿದ್ದಿದೆ.ಸುಮಾರು 6 ವರ್ಷದ ಗಂಡು ಚಿರತೆಯಾಗಿದ್ದು,ಕಾರ್ಕಳ ವಲಯ ಅರಣ್ಯಾಧಿಕಾರಿ ಶ್ರೀ ಜಿ.ಡಿ ದಿನೇಶ್ ರವರ ನೇತೃತ್ವದಲ್ಲಿ ಕಾರ್ಕಳ ವಲಯದ ಸಿಬ್ಬಂದಿಯವರು ಬಾವಿಯಿಂದ ಮೇಲೆತ್ತಿ ರಕ್ಷಿಸಲಾಗಿದೆ.  ಚಿರತೆಯನ್ನು ಆರೋಗ್ಯ ತಪಾಸಣೆ ನಡೆಸಿ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗುವುದೆಂದು ಕಾರ್ಕಳ ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ  ಪ್ರಕಾಶ್ಚಂದ್ರ, ಹುಕ್ರಪ್ಪ ಗೌಡ, ರಾಘವೇಂದ್ರ ಶೆಟ್ಟಿ, ಚಂದ್ರಕಾಂತ್ ಪೋಳ್, ಅರಣ್ಯ ರಕ್ಷಕರಾದ ಎ.ಡಿ ಪೊನ್ನಪ್ಪ, ಭಾಸ್ಕರ, ಶ್ರೀಧರ್ ನರೇಗಲ್, ಪ್ರಕಾಶ್, ಮಹಾಂತೇಶ್ ಎಚ್ ಗೋಡಿ, ಬಾಬು ಪೂಜಾರಿ, ಶಮೀಮ್, ಬಾಬುಪೂಜಾರಿ ಯಾನೆ ಪ್ರಕಾಶ್, ಶ್ರೀಧರ ಪೂಜಾರಿ ಹಾಗೂ ಸ್ಥಳೀಯರಾದ ಮಾಜಿ ಎ.ಪಿ.ಎಂಸಿ ಅಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ, ಹಾಗೂ ಇನ್ನಿತರರ ಭಾಗವಹಿಸಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು