12:38 PM Friday21 - November 2025
ಬ್ರೇಕಿಂಗ್ ನ್ಯೂಸ್
ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ…

ಇತ್ತೀಚಿನ ಸುದ್ದಿ

ಕಾರ್ಕಳ ಮೆಸ್ಕಾಂ ಕಚೇರಿ ಬಳಿ ಅಕ್ರಮ ಕಟ್ಟಡ ನಿರ್ಮಾಣ?: ರಸ್ತೆ ಮಾರ್ಜಿನ್ ನಲ್ಲೇ ಅಂಗಡಿ‌ ಕೋಣೆ?: ಕ್ರಮಕ್ಕೆ ತಹಶೀಲ್ದಾರರಿಗೆ ಮನವಿ

21/06/2023, 19:36

ಕಾರ್ಕಳ(reporterkarnataka.com): ಮೆಸ್ಕಾಂ ಕಚೇರಿ ಬಳಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಕಾರ್ಕಳ ತಹಶಿಲ್ದಾರರಿಗೆ ಪುರಸಭಾ ಸದಸ್ಯರು ಮನವಿ ಸಲ್ಲಿಸಿದರು.

2020 ರಲ್ಲಿ ನಡೆದ ಪುರಸಭೆಯ ಮಾಸಿಕ ಸಭೆಯ ನಿರ್ಣಯದಲ್ಲಿ ಜೈನ್ ಹೋಟೆಲ್ ಮುಂಬಾಗದಲ್ಲಿ ನಂದಿನ ಹಾಲಿನ ಡೈರಿ ನಿರ್ಮಾಣಕ್ಕೆ ಸ್ಥಳೀಯ ಪುರಸಭಾ ಸದಸ್ಯರ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಗಿದ್ದು ಆದರೆ ಈಗ ಅದನ್ನು ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿರುವ ಮಕ್ಕಳ ಪಾರ್ಕ್ ಬಳಿ ನಿರ್ಮಾಣ ‌ಮಾಡುತ್ತಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ ವ್ಯಾಪ್ತಿಯ ಒಳಗೆ ಬರುತ್ತಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯ ನಿರಾಕ್ಷೇಪಣ ಪತ್ರದ ಅಗತ್ಯವಿದೆ. ಆದರೆ ಇದಾವುದು ಇಲ್ಲದೆ ಕಟ್ಡದ ನಿರ್ಮಾಣವಾಗುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯ ಪುರಸಭಾ ಸದಸ್ಯರಾದ ಪ್ರಭಾ ಕಿಶೋರ್ ಮನವಿ ಸಲ್ಲಿಸಿದರು. ಈ ಸಂಬಂಧದಲ್ಲಿ ಪುರಸಭಾ ಸದಸ್ಯರಾದ ಶುಭದ ರಾವ್, ಸೀತಾರಾಮ್, ಪ್ರತಿಮಾ, ವಿನ್ನಿ‌ಬೋಲ್ಡ್ ಮೆಂಡೋನ್ಸಾ, ಅಜಿತ್ ಹೆಗ್ಡೆ ಮಾಳ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು