ಇತ್ತೀಚಿನ ಸುದ್ದಿ
ಕಾರ್ಕಳ: ಭೀಕರ ರಸ್ತೆ ದುರಂತ; ಒಂದೇ ಕುಟುಂಬದ 3 ಮಂದಿ ಸ್ಥಳದಲ್ಲೇ ಸಾವು
10/12/2022, 10:35

ಕಾರ್ಕಳ(reporterkarnataka.com): ಬಜಗೋಳಿ ಸಮೀಪದ ನೆಲ್ಲಿಕಾರು ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪುಟ್ಡ ಮಗು ಸೇರಿದಂತೆ 3 ಮಂದಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಖಾಸಗಿ ಬಸ್ ಹಾಗೂ ಕಾರು ನಡುವೆ ಈ ಅಪಘಾತ ನಡೆದಿದೆ. ಆಂಧ್ರ ಮೂಲದ ಬೆಂಗಳೂರು ನಿವಾಸಿ ನಾಗರಾಜ(40) ಅವರ ಪತ್ನಿ ಪ್ರತ್ಯುಷಾ(32) ಹಾಗೂ ದಂಪತಿಯ ಎರಡು ವರ್ಷದ ಮಗು ಮೃತಪಟ್ಟವರು. ಇವರೆಲ್ಲ ಕಾರಿನಲ್ಲಿ ಧರ್ಮಸ್ಥಳದಲ್ಲಿ ಪೂಜೆ ನೆರವೇರಿಸಿ ಶೃಂಗೇರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.