ಇತ್ತೀಚಿನ ಸುದ್ದಿ
ಕಾರ್ಕಳ: ಅನಾರೋಗ್ಯಪೀಡಿತ ವ್ಯಕ್ತಿ ತೋಡಿಗೆ ಬಿದ್ದು ಸಾವು
16/01/2022, 17:00

ಕಾರ್ಕಳ(reporterkarnataka.com): ಅನಾರೋಗ್ಯದಿಂದ ಕೂಡಿದ್ದ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಬಂದಲ್ಪಾಡಿ ಎಂಬಲ್ಲಿ ನಡೆದಿದೆ .
ಉಮೇಶ್ (50) ಎಂಬುವವರು ಮೃತಪಟ್ಟವರು. ಅಸ್ತಮ ಹಾಗು ಫಿಟ್ಸ್ ಕಾಯಿಲೆಯಿಂದ ಬಳಲುತಿದ್ದ ಉಮೇಶ್ ಅವರು ಜ.15 ರಂದು ಹತ್ತಿರದ ಬಂಡಸಾಲೆಯ ತೋಟದ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಶೌಚಕ್ಕೆ ಹೋಗಿದ್ದಾಗ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.