ಇತ್ತೀಚಿನ ಸುದ್ದಿ
ಕಾರಿನ ಬ್ರೇಕ್ ಫೈಲ್: ಪ್ರತಿಪಕ್ಷ ಉಪ ನಾಯಕ ಯು. ಟಿ. ಖಾದರ್ ಅಪಾಯದಿಂದ ಪಾರು
09/12/2022, 21:48

ಮಂಗಳೂರು(reporterkarnataka.com): ಪ್ರತಿಪಕ್ಷದ ಉಪನಾಯಕ ಹಾಗೂ ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರ್ ಬ್ರೇಕ್ ಫೈಲ್ ಆಗಿದ್ದು, ಅದೃಷ್ಟವಶಾತ್ ಖಾದರ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಶುಕ್ರವಾರ ಅಪರಾಹ್ನ ಈ ಘಟನೆ ಬಂಟ್ವಾಳ ಬಂಟರ ಭವನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದಾಗ ನಡೆದಿದೆ. ಪಡೀಲ್ ಬಳಿಯ ಕಣ್ಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರಿನ ಬ್ರೇಕ್ ಫೈಲ್ ಆಗಿದ್ದು, ಚಾಲಕ ಲಿಬ್ಜಿತ್ ತಕ್ಷಣ ಕಾರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬದಲಿ ಕಾರಿನಲ್ಲಿ ಖಾದರ್ ಅವರು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಅದೃಷ್ಟವಶತ್ ಶಾಸಕರು ಹಾಗೂ ಕಾರಲ್ಲಿದ್ದವರು ಏನೂ ಅಪಾಯವಾಗದೆ ಪಾರಾಗಿದ್ದಾರೆ.
ಈ ಬಗ್ಗೆ ಕಾರಿನ ಚಾಲಕ ಲಿಬ್ಜಿತ್ ರಿಪೋಟರ್ ಕರ್ನಾಟಕಕ್ಕೆ ಪ್ರತಿಕ್ರಿಸಿ, ನಗರದ ಪಡೀಲ್ ನ ಟೊಯೋಟಾ ಶೋರೂಮ್ ನಲ್ಲಿ ಕಾರನ್ನು ಸರ್ವಿಸ್ ಆಗಿ ತಂದು ಇಂದಿಗೆ 5 ದಿನ ಮಾತ್ರ ಆಗಿದ್ದು. ಅದಲ್ಲದೆ ಶಾಸಕರಿಲ್ಲದೆ ದಿನಕ್ಕೆ 10 ಕಿ.ಮೀ. ಓಡಿರಬಹದು. ಗೇರ್ ನಿಂದ ಕಂಟ್ರೋಲ್ ಮಾಡಿ ಕಾರು ನಿಲ್ಲಿಸಿದ್ದೇನೆ. ದೇವರ ದಯೆಯಿಂದ ಅವಘಡ ಏನು ಆಗಿಲ್ಲ. ಶಾಸಕರಿಗೆ ಏನು ಆಗಿಲ್ಲ. ನಂತರ ಬೇರೆ ಕಾರಿನ ವ್ಯವಸ್ಥೆ ಮಾಡಿದ್ದೇನೆ. ಈ ಬಗ್ಗೆ ಶೋರೂಮ್ ತೆರಳಿ ಕೇಳಿದ್ರೆ. ಬ್ರೇಕ್ ಲಿಕ್ವಿಡ್ ಹೋಗಿರಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಒಬ್ಬ ಜನ ಪ್ರತಿನಿಧಿಗೆ ಸರಿಯಾದ ಸರ್ವಿಸ್ ನೀಡಲಾಗಿಲ್ಲವಾದರೆ ಜನ ಸಾಮಾನ್ಯರಿಗೆ ಸಮಾಧಾನಕರ ಉತ್ತರಸಿಗಬಹುದೇ ಎಂಬುದು ಅವರ ಅಳಲು ವ್ಯಕ್ತಪಡಿಸಿದರು.