ಇತ್ತೀಚಿನ ಸುದ್ದಿ
ಕರಾವಳಿಯ ಸ್ಪೀಕರ್ ಗಳ ಪರಂಪರೆಯನ್ನು ಯು.ಟಿ ಖಾದರ್ ಮುಂದುವರಿಸುವ ವಿಶ್ವಾಸವಿದೆ: ಮಾಜಿ ಸಿಎಂ ಮೊಯ್ಲಿ
20/06/2023, 00:11
ಮಂಗಳೂರು(reporterkarnataka.com): ಯು.ಟಿ.ಖಾದರ್ ಅವರು ಕರಾವಳಿಯ ಸ್ಪೀಕರ್ ಗಳ ದೊಡ್ಡ ಪರಂಪರೆಯನ್ನು ಉತ್ತಮ ರೀತಿಯಲ್ಲಿ ಮುಂದುವರಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಶಯ ವ್ಯಕ್ತಪಡಿಸಿದರು.
ತುಳು ಪರಿಷತ್ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾದರ್ ಅವರು ಅಜಾತಶತ್ರು. ಅವರು ರಾಜ್ಯದ ಅತ್ಯಂತ ಯಶಸ್ವಿ ಸಭಾಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಖಾದರ್ ಅವರು ವಿಧಾನಸಭೆಯಲ್ಲಿರುವ ಪ್ರತಿಭಾನ್ವಿತ ಯುವಕರಿಗೆ
ಹೆಚ್ಚು ಮಾತನಾಡಲು ಅವಕಾಶ ನೀಡಬೇಕು. ಆ ಮೂಲಕ ಅವರಲ್ಲಿರುವ ಪ್ರತಿಭೆಯ ವಿಶೇಷ ವಿಕಸನ ಕಾರಣರಾಗಬೇಕು.ಇಂತಹ ಅಪೂರ್ವವಾದ ಅವಕಾಶವಿರುವುದು ಸಭಾಪತಿಗೆ ಮಾತ್ರ ಎಂದು ಮಾಜಿ ಮುಖ್ಯ ಮಂತ್ರಿ ನುಡಿದರು.
ವಿಧಾಸಭೆ ಮತ್ತು ಸಂಸತ್‌ನಲ್ಲಿ ಕ್ರಿಮಿನಲ್ ಹಿನ್ನೆಲೆಯವರು ಇರುವುದರಿಂದ ಅಂತಹರನ್ನು ತಿದ್ದುವ ಅವಕಾಶ ಸ್ಪೀಕರ್ ಅವರಿಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತುಳು ಪರಿಷತ್ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಜಯರಾಮ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್‌ಸಿಡಿಸಿಸಿ ಬ್ಯಾಂಕ್ ಅದ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನಾ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಸದಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದ.ಕ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅದ್ಯಕ್ಷ ಜಯಶೀಲ ಅಡ್ಯಂತಾಯ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅದ್ಯಕ್ಷ ಹರಿಕೃಷ್ಣ ಪುನರೂರು, ವಕೀಲರ ಸಂಘದ ಅದ್ಯಕ್ಷ ಪೃಥ್ವಿರಾಜ್ ರೈ,ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಉಪಾದ್ಯಕ್ಷೆ ವಿಜಯಲಕ್ಷ್ಮೀಬಿ. ಶೆಟ್ಟಿ, ದ.ಕ. ಜಿಲ್ಲಾ ಹಾಲು ಒಕ್ಕೂಟದ ಅದ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಅಹಿಂದ ಜನಚಳವಳಿ ಅದ್ಯಕ್ಷ ಪದ್ಮನಾಭ ನರಿಂಗಾನ, ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ತುಳು ನಾಟಕ ಕಲಾವಿದರ ಒಕ್ಕೂಟದ ಕಿಶೋರ್ ಡಿ.ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಜತೆ ಸಂವಾದ ನಾಗರಿಕ ಸನ್ಮಾನ ಕಾರ್ಯಕ್ರಮದ ಮೊದಲು ಸ್ಪೀಕರ್ ಯು.ಟಿ. ಖಾದರ್ ನಡೆಸಿದರು. ಮಂಗಳೂರು ವಿಶ್ವವಿದ್ಯಾನಿಲಯ, ಯೇನೇಪೋಯ, ನಿಟ್ಟೆ ವಿವಿ‘ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸೇರಿ ನಾನಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಸಭಾದ್ಯಕ್ಷ ಎನ್ನುವುದು ಅತ್ಯಂತ ಗೌರವಯುತವಾದ ಸ್ಥಾನ, ವಿಧಾನಸಭೆಯಲ್ಲಿ ನಾನು ಸ್ಪೀಕರ್ ಆಗಿ ಪ್ರತಿಪಕ್ಷದ ಮಿತ್ರನಾಗಿ ಆಡಳಿತ ಪಕ್ಷವನ್ನು ಇನ್ನು ಚುರುಕಾಗಿ ಕೆಲಸ ಮಾಡಿಸುವುದು ನನ್ನ ಕರ್ತವ್ಯ. ವಿಧಾನಸಭೆಯಲ್ಲಿ ಆಯ್ಕೆಯಾದ ಯುವ ಶಾಸಕರಿಗೆ ಹೆಚ್ಚು ಅವಕಾಶ ಕೊಟ್ಟು ಅವರಲ್ಲಿರುವ ಹೊಸ ವಿಚಾರ ಮತ್ತು ಪ್ರತಿಭೆಗಳಿಗೆ ಅವಕಾಶವಾಗುವಂತೆ ಮಾಡುತ್ತೇನೆ. ಇವತ್ತು ಈ ಕಾರ್ಯಕ್ರಮಕ್ಕೆ ಸಂಘಟಕರು ವಿದ್ಯಾರ್ಥಿಗಳನ್ನು ಕರೆಸಿದ ಉದ್ದೇಶ ನೀವೂ ಇಂತಹ ಉನ್ನತ ಸ್ಥಾನವನ್ನು ಏರಬೇಕು. ನಾನು ಕೂಡಾ ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ ಸೇವಕನಾಗಿ,ವಿದ್ಯಾರ್ಥಿ ಸಂಘನೆಯಲ್ಲಿನ ತೊಡಗಿಸಿಕೊಂಡಿದ್ದರಿಂದ ರಾಜಕೀಯದ ಏರುಪೇರುಗಳನ್ನು ದಾಟಿ ಈ ಸ್ಥಾನದಲ್ಲಿದೆ ಎಂದರು.
ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಜಯರಾಮ್ ಅಮೀನ್, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ನಾಗರತ್ನ ಕೆ.ಎ ಯೇನಾಪೋಯ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಅಶ್ವಿನಿ ಶೆಟ್ಟಿ, ನಿಟ್ಟೆ ವಿವಿಯ ಎನ್ .ಎಸ್.ಎಸ್ ಸಂಯೋಜನಾಧಿಕಾರಿ ಡಾ.ಶಶಿಕುಮಾರ್,
ತುಳು ಪರಿಷತ್ ಗೌರವ ಅದ್ಯಕ್ಷ ಸ್ವರ್ಣ ಸುಂದರ್ ಮತ್ತಿತ್ತರರು ಉಪಸ್ಥಿತರಿದ್ದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನಿರೂಪಿಸಿದರು.
ತುಳು ಪರಿಷತ್ ಗೌರವ ಅಧ್ಯಕ್ಷ ಡಾ.ಪ್ರಭಾಕರ ನೀರ್ ಮಾರ್ಗ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಸನ್ಮಾನ ಪತ್ರ ವಾಚಿಸಿದರು, ಕೋಶಾಧಿಕಾರಿ ಶುಭೋದಯ ಆಳ್ವಾ ವಂದಿಸಿದರು. ಡಾ.ಝೀಟಾ ಲೋಬೋ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.