ಇತ್ತೀಚಿನ ಸುದ್ದಿ
ಕರಾವಳಿ ಜಿಲ್ಲೆಗಳಲ್ಲಿ ಪ್ರಕ್ಷುಬ್ಧಗೊಂಡ ಕಡಲು: 4 ಮೀಟರ್ ಎತ್ತರದ ಸಮುದ್ರದಲೆ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆ
10/07/2022, 19:49
ಮಂಗಳೂರು(reporterkarnataka.com): ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಇಂದಿನಿಂದ 2 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಭಾನುವಾರ ಸಮುದ್ರದ ಅಲೆಗಳ ಎತ್ತರ 3.5 ರಿಂದ 4.0 ಮೀಟರ್ ವ್ಯಾಪ್ತಿಯಲ್ಲಿರಲಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಗೆ ಎರಡು ದಿನ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಇರಲಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.