12:26 PM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಕರ್ನಾಟಕದ ನಾಲ್ಕು ಜೆಸ್ವಿಟ್ ಉಪಯಾಜಕರಿಗೆ ಮಂಗಳೂರಿನಲ್ಲಿ ಗುರುದೀಕ್ಷೆ

12/10/2024, 22:20

ಮಂಗಳೂರು(reporterkarnataka.com): ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹರವರು, ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ನಾಲ್ಕು ಉಪಯಾಜಕರುಗಳಿಗೆ ಯಾಜಕ ದೀಕ್ಷೆಯನ್ನು ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಅಕ್ಟೋಬರ್ 12ರಂದು ನೀಡಿದರು.
ಗುರುದೀಕ್ಷೆ ಪಡೆದ ಉಪಯಾಜಕರು: ವಂ. ಮ್ಯಾಕ್ಸಿಮ್ ಮಾರ್ಟಿನ್ ಡಿಸೋಜ, ವಂ. ಜೋಸ್ವಿನ್ ಪಿರೇರಾ, ವಂ. ಕಿರಣ್ ಲೀಮಾ, ಹಾಗೂ ವಂ. ವಿಲ್ಸನ್ ಸಲ್ಡಾನ್ಹಾ. ತಮ್ಮ ಪ್ರಭೊಧನೆಯಲ್ಲಿ ಓರ್ವ ಯಾಜಕನು ಕ್ರಿಸ್ತನ ರಾಯಭಾರಿಗಾಗಿ ತಮ್ಮ ಜೀವನದಲ್ಲಿ ಕ್ರಿಸ್ತನು ಸಾರಿದ ಮೌಲ್ಯಗಳನ್ನು ಪ್ರತಿಬಿಂಬಿಸಲು ಕರೆ ನೀಡಿದರು.
“ದೇವರಿಂದ ಅಭಿಷಿಕ್ತನಾದವನ ಬಲವೇ ದೇವರ ಸಾನಿಧ್ಯ. ನಾವು ಕ್ರಿಸ್ತನಂತಾಗಲು ಕ್ರಿಸ್ತನ ಜೀವನ ಮತ್ತು ಕಾಯಕವನ್ನು ಅನುಸರಿಸುವ ಯಾಜಕರಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಸ್ವಾಮಿ ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂದನೀಯ ಸ್ವಾಮಿ ಅನಿಲ್ ಡಿಮೆಲ್ಲೊ ಹಾಗೂ ನೂರಕ್ಕೂ ಹೆಚ್ಚು ಗುರುಗಳು ಹಾಗೂ ಕನ್ಯಾಸ್ತಿಯರು ಹಾಜರಿದ್ದರು. ವಂದನೀಯ ಸ್ವಾಮಿ ವಿಶ್ವಾಸ್ ಮಿಸ್ಕಿತ್ರವರು ಬಲಿಪೂಜೆಯ ನಿರ್ವಹಣೆಯನ್ನು ನೋಡಿಕೊಂಡರು. ವಂದನೀಯ ಸ್ವಾಮಿ ಲೆಸ್ಟನ್ ಲೋಬೊರವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೋಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು