3:33 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕಾಂತಾವರ: ಡಾ.ಶ್ರೀ ಶಿವರಾತ್ರೇಶ್ವರ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿ ಮಹೋತ್ಸವ

09/09/2022, 13:16

ಕಾಂತಾವರ(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾದ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರೂವಾರಿಯಾದ ಸೂತ್ತೂರು ಬ್ರಹ್ನಮಠದ ಲಿಂಗೈಕ್ಯ ಡಾ.ಶ್ರೀ ಶಿವರಾತ್ರೇಶ್ವರ ರಾಜೇಂದ್ರ ಮಹಾಸ್ವಾಮಿಗಳವರ 107ನೆಯ ಜಯಂತಿ ಮಹೋತ್ಸವ ಆಚರಿಸಲಾಯಿತು. 

ದಕ್ಷಿಣ ಕನ್ನಡ ಜಿಲ್ಲೆಯ “ಕದಳಿ ಮಹಿಳಾ ವೇದಿಕೆ”ಯ ಅಧ್ಯಕ್ಷರಾದ ಸುರೇಖಾ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 12ನೆಯ ಶತಮಾನದ ಬಸವಾದಿ ಶರಣರ “ಅನುಭವ ಮಂಟಪ”ವು ವರ್ಗ ಭೇದ, ವರ್ಣಭೇದಗಳನ್ನು ತೊಡೆದು ಸಮಾನತೆಯ ಬೀಜ ಬಿತ್ತಿತ್ತು. ಪ್ರಸ್ತುತ ಸಮಾಜದ ಸಂಘರ್ಷಗಳು ನಾಡಿನ ಸಂಸ್ಕೃತಿಯನ್ನು ಹಾಳುಗೆಡಹುತ್ತೀವೆ. ಸಮಾಜದ ಉನ್ನತಿಗೆ ಪೂರಕವಾದ ಬಸವ ತತ್ವಗಳನ್ನು ಪ್ರಚಾರಗೊಳಿಸಿ ಸಮಾಜದಲ್ಲಿ ಸಹಬಾಳ್ವೆಯ ಜೀವನಕ್ಕೆ ಸಂಘಗಳು ಕಾರ್ಯನಿರ್ವಹಿಸಬೇಕೆಂದರು. 

ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತನ ಇಸ್ಮತ್ ಜಹಾನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಎಲ್ಲ ಧರ್ಮ ಮಂತ್ರ ಒಂದೇ ಸಮಾನತೆ. ಜನರ ಜೀವನಶೈಲಿ ನೈಸರ್ಗಿಕವಾಗಿಲ್ಲದ ಕಾರಣ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನಮ್ಮ  ಸ್ವಾಸ್ಥ್ಯವನ್ನು ಕಾಪಾಡಿಕೂಳ್ಳುವುರೊಂದಿಗೆ ಸಮಾಜದ ಹಿತ ಕಾಪಾಡಬೇಕೆಂದರು. 


ಉಪನ್ಯಾಸ ನೀಡಲು ಬಂದಿದ್ದ ಸುಜೀರು ಶಾಲೆಯ ಮುಖ್ಯ ಶಿಕ್ಷಕಿ ಸಂಸ್ಥಾಪಕರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸುತ್ತಾ ಈಗಿನ ಯುವ ಪೀಳಿಗೆ ಶರಣ ತತ್ವಗಳನ್ನು ಅನುಸರಿಸಬೇಕು. ಅವಿಭಕ್ತ ಕೂಡು ಕುಟುಂಬದಲ್ಲಿ ಭದ್ರತೆಯಿಂದ ಸಮಾಜಮುಖಿ ಜೀವನ ನಡೆಸಬೇಕಂದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ವಚನ ಚಿಂತನೆ, ಗಾದೆಮಾತು, ಒಗಟು, ಒಡಪು, ರಸಪ್ರಸ್ನೆ, ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು ಸಾಂಗವಾಗಿ ನೆರವೇರಿದವು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಲಗೊಂಡು ಸಂಪನ್ನಗೊಂಡಿತ್ತು,

ಇತ್ತೀಚಿನ ಸುದ್ದಿ

ಜಾಹೀರಾತು