2:45 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕನ್ನಡ ಸಮ್ಮೇಳನಗಳ ಸಂಘಟಕ ಮಹೇಶ್ ಬಾಬು ಸುರ್ವೆಗೆ ಗಡಿನಾಡ ಶಿರೋಮಣಿ ಪ್ರಶಸ್ತಿ ಪ್ರದಾನ

20/06/2022, 21:54

ಬೆಳಗಾವಿ(reporterkarnataka.com):ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ ಎಂದು ಶ್ರೀಮದ್ ರಂಭಾಪುರಿ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಥಣಿ ಇವರ ಆಶ್ರಯದಲ್ಲಿ ಭರಮಖೋಡಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ಸವ, ಸಂಭ್ರಮಗಳು ನೆಲದ ಸಂಸ್ಕೃತಿಯ ಪ್ರತೀಕವೆಂದು ನುಡಿದರು.

ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ ಕಸ್ತೂರಿ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. “ಕನ್ನಡ ಭಾಷೆ ನಮ್ಮ ಸಂಸ್ಕೃತಿ”, ಭಾರತವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅದು ನಮ್ಮ ಗುರುತಾಗಿದೆ. ಧರ್ಮ, ಕಲೆ, ಬೌದ್ಧಿಕ ಸಾಧನೆಗಳು ಅಥವಾ ಪ್ರದರ್ಶನ ಕಲೆಗಳಲ್ಲಿ ಅದು ನಮ್ಮನ್ನು ವರ್ಣರಂಜಿತ, ಶ್ರೀಮಂತ ಮತ್ತು ವೈವಿಧ್ಯಮಯ ರಾಷ್ಟ್ರವನ್ನಾಗಿ ಮಾಡಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ ಮಾರ್ಗದರ್ಶಿಯಾಗಿ ಆಗಿದೆ ಎಂದು ಅವರು ನುಡಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಥಣಿ ಇವರ ಆಶ್ರಯದಲ್ಲಿ ಭರಮಖೋಡಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ಸವ, ಸಂಭ್ರಮಗಳು ನೆಲದ ಸಂಸ್ಕೃತಿಯ ಪ್ರತೀಕವೆಂದು ನುಡಿದರು.

ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

‘ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕುವೆಂಪುರವರ ಮಾತುಗಳು ನಮ್ಮ ಮೆದುಳಿನಲ್ಲಿ ಸದಾ ಪ್ರತಿಧ್ವನಿಸಿ, ನಾವು ನಮ್ಮ ಬೇರುಗಳನ್ನು ಮರೆಯದೆ, ನಮ್ಮ ಕಲಾಚಾರವನ್ನು ಬಿಡದೆ, ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗುವಂತೆ ಬಾಳಬೇಕು. ಇದು ನಮ್ಮೆಲ್ಲರ ಕರ್ತವ್ಯ ಹೌದು, ಅದಕ್ಕಿಂತಲೂ ಮುಖ್ಯವಾಗಿ ನಾವು ಒಂದು ಗುಣಮಟ್ಟದ ಜೀವನ ನಡೆಸಲು ಬಹು ಅಗತ್ಯವಾದ ಮೂಲ ತತ್ವ ಕನ್ನಡವೆಂದರು.

ಇದೇ ಸಂದರ್ಭದಲ್ಲಿ ಗಡಿಭಾಗದಲ್ಲಿ ಮಾತೋಶ್ರೀ ಸುಕನ್ಯಾ ಬಸಲಿಂಗಯ್ಯ ಹಿರೇಮಠ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಉದ್ಘಾಟನೆ ಜರುಗಿತು. ಮಾತೋಶ್ರೀ ಸುಕನ್ಯಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ, ಶೆಟ್ಟರಮಠ, ಬಾಗೋಜಿಕೊಪ್ಪ, ಹೊನವಾಡ, ತುಂಗಳ, ಕಕಮರಿ ಪೂಜ್ಯರು ಆಶೀರ್ವಚನ ನೀಡಿದರು.  ಡಾ. ಬಸಲಿಂಗಯ್ಯ ಹಿರೇಮಠ ಮಾತನಾಡಿದರು. ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಡಾ. ರಾಜಶೇಖರ ಮಠಪತಿ, ಮಹೇಶಬಾಬು ಸುವೆ೯. ಕಂಪ್ಯೂಟರ್ ಕನ್ನಡತಿ ಬುವನೇಶ್ವರಿ ಮೇಲಿನ ಮಠ ಬಿಜಾಪುರ್, ಕನ್ನಡ ಪರ ನ್ಯಾಯವಾದಿ
ಕೆ. ಎಲ್. ಕುಂದರಗಿ, ರವಿ ಪೂಜೇರಿ, ಸಿಪಿಐ ಬಸವರಾಜ ಬಿಸನಕೊಪ್ಪ ಡಾ.ಪ್ರಕಾಶ್‌ ಕುಮಠಳ್ಳಿ, ಪಾಂಡುರಂಗ ಕಾಂಬಳೆ, ಸಿದ್ಧಾರ್ಥ ಸಿಂಗೆ ಸೇರಿದಂತೆ ಇತರರು ಇದ್ದರು. 

ಇದೇ ಸಂದರ್ಭದಲ್ಲಿ ಗಡಿನಾಡಿನ ರಾಜ್ಯಗಳಾದ ಗೋವಾ, ಮಂತ್ರಾಲಯ, ಪಾಂಡಿಚೇರಿ, ತಿರುಪತಿ ಗಳಲ್ಲಿ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಸಂಘಟಕ ಮಹೇಶ್ ಬಾಬು ಸುರ್ವೇಯವರಿಗೆ ಹಾಗೂ

ಬಿಜಾಪುರ ಜಿಲ್ಲೆಯ ಕಂಪ್ಯೂಟರ್ ಕನ್ನಡತಿ ಭುವನೇಶ್ವರಿ ಮೇಲಿನಮಠ, ಹಿರಿಯ ಕನ್ನಡ ಪರ ನ್ಯಾಯವಾದಿ ಕೆ. ಎಲ್.ಕುಂದರಗಿ ಹಾಗೂ ಇತರರಿಗೆ ಅವರ ಗಡಿನಾಡಿನ ಸಾಧನೆಗಾಗಿ ಗಡಿನಾಡು ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ನೃತ್ಯ, ಸಮೂಹ ನೃತ್ಯ, ಕುಚಪುಡಿ ನೃತ್ಯ ಸೇರಿದಂತೆ ಹತ್ತಕ್ಕು ಹೆಚ್ಚು ಕಲಾತಂಡಗಳು ಭಾಗವಹಿಸಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. 

ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಮಹಾದೇವ ಬಿರಾದಾರ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು