ಇತ್ತೀಚಿನ ಸುದ್ದಿ
ಕನ್ನಡ ಜಾನಪದ ಪರಿಷತ್ ಕಾಸರಗೋಡು ಘಟಕ ಅಧ್ಯಕ್ಷರಾಗಿ ಡಾ. ವಾಮನ್ ರಾವ್ ಬೇಕಲ್ ನೇಮಕ
13/08/2025, 22:17

ಕಾಸರಗೋಡು(reporterlarnataka.com): ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಸ್ಥಾಪಕ ಸಂಚಾಲಕರಾಗಿರುವ ಡಾ. ವಾಮನ್ ರಾವ್ ಬೇಕಲರನ್ನು ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ಎಸ್ ಬಾಲಾಜಿ ಇವರು ಕೇರಳ ರಾಜ್ಯ ಕಾಸರಗೋಡು ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ನೀಡಿದ್ದಾರೆ.
ಕಾಸರಗೋಡು ಜಿಲ್ಲೆಯ ಜಾನಪದ ವಿದ್ವಾಂಸರು, ಕಲಾವಿದರು, ಜಾನಪದ ಕಲಾ ಕಾಯಕ ಯೋಗಿಗಳು, ತಂಡಗಳು, ಆಸಕ್ತ ಜಾನಪದ ವ್ಯಕ್ತಿಗಳು ಡಾ. ವಾಮನ್ ರಾವ್ ಬೇಕಲ್, ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್ತು, ಕನ್ನಡ ಭವನ ಸಂಕೀರ್ಣ, ನುಳ್ಳಿಪ್ಪಾಡಿ, ಕಾಸರಗೋಡು 671121.ಮೊ. 9633073400,ಈ ವಿಳಾಸದಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.
ಸದ್ಯದಲ್ಲಿಯೇ ಉದ್ಘಾಟನೆ ಗೊಳ್ಳಲಿರುವ ಕನ್ನಡ ಜಾನಪದ ಪರಿಷತ್ತು ಕಾಸರಗೋಡು ಘಟಕದ ಆಯ್ದ ಆಸಕ್ತರ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ಇಚ್ಚಿಸುವ ಜಾನಪದ ಕಾಯಕ ಯೋಗಿಗಳು 9633073400ಈ ಸಂಖ್ಯೆಯಲ್ಲಿ ಸಂಪರ್ಕಿಸಬೇಕು.
ಉದ್ಘಾಟನಾ ಸಮಾರಂಭದಲ್ಲಿ 10 ಮಂದಿ ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇರು ವ್ಯಕ್ತಿತ್ವಗಳನ್ನು “ಜಾನಪದ ಕುಲ ಪುರಸ್ಕಾರ “ಪ್ರಶಸ್ತಿ ಹಾಗೂ 5 ತಂಡಗಳಿಗೆ “ಜಾನಪದ ಕುಲ ಸಾಧಕ ಪ್ರಶಸ್ತಿ “ನೀಡಿ ಗೌರವಿಸಲಿದೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಯೊಂದಿಗೆ ಡಾ. ವಾಮನ್ ರಾವ್ ಬೇಕಲ್ ಅವರನ್ನು ವಾಟ್ಸಪ್ ಮೂಲಕ ಸಂಪರ್ಕಿಸಬೇಕೆಂದು ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಭವನ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.