6:39 AM Tuesday30 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಕಂಕನಾಡಿ ಗರೋಡಿ 150ರ ಸಂಭ್ರಮ: ಮಂಗಳಾದೇವಿಯಿಂದ ಹಸಿರು ಹೊರೆಕಾಣಿಕೆ

03/03/2023, 23:09

ಮಂಗಳೂರು(reporterkarnataka.com):ನಗರದ ಕಂಕನಾಡಿ ಗರೋಡಿ ಕ್ಷೇತ್ರದ 150ರ ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಹಸಿರು ಹೊರೆಕಾಣಿಕೆಯನ್ನು ಮಂಗಳಾದೇವಿ ಬಿಲ್ಲವ ಸಂಘದ ವತಿಯಿಂದ ಮಂಗಳಾದೇವಿ ದೇವಸ್ಥಾನದ ವಠಾರದಿಂದ ದೇವಸ್ಥಾನದ ಆಡಳಿತ ಮೊಕ್ತೆಸರಾದ ರಮಾನಾಥ ಹೆಗ್ಡೆ ಮತ್ತು ಅತ್ತಾವರ ಅರಸು ಮುಂಡಿತ್ತಾಯ ದೇವಸ್ಥಾನದ ಆಡಳಿತ ಮೊಕ್ತೇಸರಾದ ವಿದ್ಯಾಧರ ಮತ್ತು ಬಿಲ್ಲವ ಸಂಘದ ಸದಸ್ಯರು ಸೇರಿಕೊಂಡು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಹೊರೆಕಾಣಿಕೆಗೆ ಬೊಳಾರ ಮಂಗಳಾ ಕ್ಯಾಟರಿಂಗ್ ಮಾಲಕರಾದ ಸತೀಶ್ ಮತ್ತು ರೊಹಿದಾಸ್ ಹಾಗೂ ಬೊಳಾರ ಮಾರಿಗುಡಿ ಕರಸೇವಕರ ಭಕ್ತ ವ್ರಂದ ಹಾಗೂ ಆಸು ಪಾಸಿನ ಸಂಘ ಸಂಸ್ತೆಗಳು ಹೊರೆಕಾಣಿಕೆ ಯನ್ನು ನೀಡಿ ಸಹಕರಿಸಿದ್ದಾರೆ.

ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಬಿ. ರಮಾನಂದ ಪೂಜಾರಿ ವಂದಿಸಿದರು.
ಹಸಿರು ಹೊರ ಕಾಣಿಕೆಯ ಮೆರವಣಿಗೆಗೆ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಚಾಲನೆ ನೀಡಿದರು. ಹಿರಿಯ ಸದಸ್ಯರಾದ ಕೆ.ಜಿ. ವಿಮಲಾ ಮೋನಪ್ಪ ಅಂಚನ್ ಹಾಗೂ ಸಲಹೆಗಾರರಾದ ವೇಣುಗೋಪಾಲ್, ಸಂಚಾಲಕ ದಿನೇಶ್ ಕುಮಾರ್ ತರುಣ್ ಮಹಿಳಾ ಘಟಕದ ಎಲ್ಲಾ ಸದಸ್ಯರು ಹಾಗೂ ಸಂಘದ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು