2:57 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಾಲುವೆಯ ಕೆನಲ್ ಬಿರುಕು ಬಿಟ್ಟು ಕೊಚ್ಚಿ ಹೋದ ಹೊಲದ ಮಣ್ಣು; ಒಂದೂವರೆ ವರ್ಷದ ಹಳೆ ಸಮಸ್ಯೆಗೆ ಕೊನೆಗೂ ಪರಿಹಾರ

30/07/2021, 08:02

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು 

info.reporterkarnataka@gmail.com

ಜಿಲ್ಲೆಯ ದೇವದುರ್ಗ ತಾಲೂಕಿನ ಬೇವಿನಬೆಂಚಿ ಗ್ರಾಮದ ಹನುಮಂತ ಎಂಬವರ ಹೊಲದ ಸಮೀಪವಿರುವ ನಾರಾಯಣಪುರ ಬಲದಂಡೆಯ ಕಾಲುವೆಯ ಕಳಪೆ ಕಾಮಗಾರಿಯಿಂದ ಕೆನಲ್ ಒಡೆದು ಹೋದ ಪರಿಣಾಮ ಮಣ್ಣು ಕೊಚ್ಚಿ ಹೋಗಿ ಬೆಳೆಗೆ ತೊಂದರೆ ಉಂಟಾಗಿದ್ದು, ಸುಮಾರು ಒಂದೂವರೆ ವರ್ಷ ಹಳೆಯದಾದ ಈ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದೆ.

ಹನುಮಂತ ಅವರಿಗೆ 3.02 ಎಕರೆ ಜಮೀನು ಇದ್ದು, ಆವರ ಹೊಲದ ಪಕ್ಕದಲ್ಲೇ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣೆ ಕಾಲುವೆ ಹಾದು ಹೋಗುತ್ತದೆ ಇದರ ಕಳಪೆ ಕಾಮಗಾರಿಯಿಂದಾಗಿ ಸಂಕಷ್ಟ ಎದುರಾಗಿತ್ತು.

ಮಣ್ಣು ಕೊಚ್ಚಿ ಹೋಗಿರುವುದರಿಂದ ಹೊಲ ಬಿತ್ತನೆಗೆ ಬಾರದೆ ಸ್ಥಿತಿಯಲ್ಲಿತ್ತು. ಹನುಮಂತ ಅವರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮೊರೆ ಹೋಗಿ ತನ್ನ. ದುಸ್ಥಿತಿಯನ್ನು ಹೇಳಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಈ ಹಿನ್ನೆಲೆಯಲ್ಲಿ ಹನುಮಂತ ಅವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೊರೆ ಹೋಗಿದ್ದರು. ಸಂಘಟನೆ ತನ್ನ ಲೆಟರ್ ಹೆಡ್ ಮೂಲಕ ಮನವಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು

ಯಾವುದೇ ರೀತಿಯ ಸ್ಪಂದನೆ ಕೊಡದೆ ಬೇಜವಾಬ್ದಾರಿತನ ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ರೈತ ಸಂಘದ

ರಾಜ್ಯದ ಗೌರವಾಧ್ಯಕ್ಷ ಶಶಿಕಾಂತ್ ಪಡಸಲಗಿ ಮತ್ತು ಇಂಚಿಗೇರಿ ಮಠದ ಗುರುಗಳು ರಾಯಚೂರಿಗೆ ಆಗಮಿಸಿ ಸುಮಾರು ಒಂದೂವರೆ ವರ್ಷ ಕಳೆದರೂ ಕಾರ್ಯರೂಪಕ್ಕೆ ಬಾರದೇ ಕಾಮಗಾರಿಯನ್ನು 


ದೇವದುರ್ಗ ಪಿಡಬ್ಲ್ಯೂಡಿ ಮೂಲಕ ನೆರವೇರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟರು. ಅಲ್ಲಿನ ನೀರಾವರಿ ಅಧಿಕಾರಿಗಳಿಗೆ ರೈತರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡದೆ ಇದ್ದರೆ ಇನ್ನು ಮುಂದೆ ನಿಮಗೆ ಉಳಿಗಾಲವಿಲ್ಲವೆಂದು ಎಚ್ಚರಿಸಿದರು. ತಕ್ಷಣ ಸ್ಪಂದಿಸಿದ ಅಧಿಕಾರಿಗಳು ತಪ್ಪಾಗಿದೆ ಗುರುಗಳೆ ಇನ್ನು ಮುಂದೆ ಕಾರ್ಯನಿರ್ವಹಣೆಯಲ್ಲಿ ಪ್ರಾಮಾಣಿಕತೆಯನ್ನು ಮರೆಯುತ್ತೇವೆ ಎಂದು ಒಪ್ಪಿಕೊಂಡು 15 ದಿವಸದೊಳಗೆ ಕೆಲಸವನ್ನು ಮುಗಿಸಿಕೊಳ್ಳಲು ತೀರ್ಮಾನಿಸಿದರು. 

ಇತ್ತೀಚಿನ ಸುದ್ದಿ

ಜಾಹೀರಾತು