ಇತ್ತೀಚಿನ ಸುದ್ದಿ
ಕಳಸ: ಭಾರಿ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಮರ; ಅದೃಷ್ಟವಶಾತ್ ದಂಪತಿ ಸಹಿತ ಇಬ್ಬರು ಮಕ್ಕಳು ಪಾರು
05/07/2022, 09:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅವ್ಯಾಹತವಾಗಿ ಮಳೆ ಮುಂದುವರಿದ್ದು, ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದಲ್ಲಿ ಕೂಲಿ ಕಾರ್ಮಿಕ ಕ್ಲೆಮೆಂಡ್ ಡಿಸೋಜ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಸಂಪೂ ರ್ಣ ಹಾನಿಗೀಡಾಗಿದೆ
ಬೆಳಗಿನ ಜಾವ 4.30ರ ವೇಳೆಗೆ ಮರ ಧರಾಶಾಯಿಯಾಗಿದ್ದು, ಕ್ಲೆಮೆಂಡ್ ಡಿಸೋಜ ಅವರ ಮನೆ ಮೇಲೆ ಬಿದ್ದಿದೆ. ಈ ಘೋರ ದುರಂತದಲ್ಲಿ
ಕೂದಲೆಳೆ ಅಂತರದಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಪಾರಾಗಿದ್ದಾರೆ.ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.