ಇತ್ತೀಚಿನ ಸುದ್ದಿ
ಕಲ್ಲಡ್ಕ: ಚತುಷ್ಪಥ ಕಾಮಗಾರಿಯ ಫ್ಲೈ ಓವರ್ ಪಿಲ್ಲರ್ ಹಠಾತ್ ಕುಸಿತ
14/10/2022, 00:05
ಬಂಟ್ವಾಳ(reporterkarnataka.com): ಚತುಷ್ಪಥ ಕಾಮಗಾರಿಯ ಫ್ಲೈ ಓವರ್ ನಿರ್ಮಾಣ ಹಂತದಲ್ಲಿ ಕುಸಿದು ಬಿದ್ದ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಪೇಟೆಯಲ್ಲಿ ಗುರುವಾರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಭಾಗವಾಗಿ ಕಲ್ಲಡ್ಕ ಪೇಟೆಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಫ್ಲೈ ಓವರ್ ಗೆ ಅಡಿಪಾಯ ಹಾಕಿ ಸರಳು ಕಟ್ಟಿ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದರಲ್ಲಿ ಒಂದು ಪಿಲ್ಲರ್ ಗುರುವಾರ ಕುಸಿದು ಬಿದ್ದಿದೆ.
ಫ್ಲೈ ಓವರ್ ಕಾಮಗಾರಿಯಿಂದ ಕಲ್ಲಡ್ಕದ ನಿವಾಸಿಗಳು ಹಾಗೂ ನಿತ್ಯ ಪ್ರಯಾಣಿಕರು ಈಗಾಗಲೇ ರೋಸಿ ಹೋಗಿದ್ದಾರೆ. ಟ್ರಾಫಿಕ್ ಜಾಮ್, ಧೂಳು ಇಲ್ಲಿ ನಿತ್ಯದ ವಿಷಯವಾಗಿದೆ.














