ಇತ್ತೀಚಿನ ಸುದ್ದಿ
ಕಲ್ಲಚ್ಚು ಪ್ರಕಾಶನದ ರಜತ ರಂಗು: ನ.1ರಂದು ಕನ್ನಡ ಕಣ್ಮನಗಳ ಕಲರವ
30/10/2025, 18:09
ಮಂಗಳೂರು(reporterkarnataka.com): ಬೆಳ್ಳಿಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ” ಕನ್ನಡ ಕಣ್ಮನಗಳ ಕಲರವ” ಸಮಾರಂಭ ನವಂಬರ್ 1ರಂದು ಸಂಜೆ 4.00 ಗಂಟೆಗೆ ನಗರದ ಹೋಟೆಲ್ ವುಡ್ ಲ್ಯಾಂಡ್ಸ್ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಕಲ್ಲಚ್ಚು ರಾಜ್ಯೋತ್ಸವ ಪುರಸ್ಕಾರವನ್ನು ಪ್ರದೀಪ ನಾಯಕ್ ಮದ್ದಡ್ಕರವರಿಗೆ ಪ್ರದಾನ ಮಾಡಲಾಗುವುದು. ಹಿರಿಯ ಕವಿ ರಾಮಚಂದ್ರ ಬೈಕಂಪಾಡಿ ಉದ್ಘಾಟಿಸುವರು. ಉಪನ್ಯಾಸಕ ಕರುಣಾಕರ ಬಳ್ಕೂರು ರಾಜ್ಯೋತ್ಸವ ಸಂದೇಶ ನೀಡಲಿದ್ದು ಸಾಹಿತಿಗಳಾದ ಶಮೀಮ ಕುತ್ತಾರ್ ಮತ್ತು ಇಜಾಕ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರಾವಳಿಯ ಹಿರಿ – ಕಿರಿ ಸಾಹಿತ್ಯ ಮತ್ತು ಪೂರಕ ಕ್ಷೇತ್ರದ ಅನೇಕ ಸಾಧಕರು ಮಾತು ಮಂಥನ, ಕಥೆ ಕವಿತೆಯಲ್ಲಿ ಪಾಲ್ಗೊಳ್ಳಲಿದ್ದು ಆಸಕ್ತರಿಗೆ ಮುಕ್ತ ಪ್ರವೇಶ ಇದೆ ಎಂದು ಸಾಹಿತಿ ಪ್ರಕಾಶಕ ಮಹೇಶ ಆರ್. ನಾಯಕ್ ತಿಳಿಸಿದ್ದಾರೆ.













