ಇತ್ತೀಚಿನ ಸುದ್ದಿ
Kalburgi | ಛಲವಾದಿ ನಾರಾಯಣಸ್ವಾಮಿಯ ಗಡಿಪಾರು ಮಾಡಿ: ಕಾಂಗ್ರೆಸ್ ಮುಖಂಡ ಕಟ್ಟಿಮನಿ ಆಗ್ರಹ
27/05/2025, 18:08

ಶಿವು ರಾಠೋಡ್ ಹುಣಸಗಿ ಕಲಬುರಗಿ
info.reporterkarnataka@gmail.com
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾರೆ. ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದು ಮಾಡಿ ಬಂಧಿಸಿ ಗಡಿಪಾರು ಮಾಡಬೇಕೆಂದು ಕಾಂಗ್ರೆಸ್ ನ ಮುಖಂಡರು ಶಾಂತ ಕುಮಾರ ಎಂ. ಕಟ್ಟಿಮನಿ ಧರ್ಮಪುರ್ ಆಗ್ರಹಿಸಿದ್ದಾರೆ.
ನಾರಾಯಣಸ್ವಾಮಿ ಕ್ಷಮೆ ಕೇಳಿದರೆ ಸಾಲದು, ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಕಪ್ಪು ಬಾವುಟ ಪ್ರದರ್ಶನ ಮಾಡಬೇಕಾಗುತ್ತದೆ. ಛಲವಾದಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ, ಹೈಕಮಾಂಡ್ ಮೆಚ್ಚಿಸಲು ಖರ್ಗೆ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಕೀಳುಮಟ್ಟದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ ಪಕ್ಷದಲ್ಲಿ ಬಂದಾಗ ಮುಂಚಿತ ಇದ್ದ ದಲಿತರನ್ನೇ ಬದಿಗಿಟ್ಟು ಈಗ ತಮ್ಮ ಸ್ವಾರ್ಥಕ್ಕಾಗಿ ತಾವೇ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ. ಇದು ದಲಿತರಿಗೆ ಮಾಡಿರು ಅನ್ಯಾಯ ಅಲ್ವ ಎಂದು ಅವರು ಪ್ರಶ್ನಿಸಿದರು?.
ತನ್ನ ನೀಚ ಬುದ್ದಿ ಕರ್ನಾಟಕ ಜನತೆಗೆ ಗೊತ್ತಿಲ್ವಾ ಮತ್ತು ಬಿಜೆಪಿಯ ಸರ್ವ ಮುಖಂಡರು ಮಾಡುತ್ತಿರುವ ಕುತಂತ್ರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿರುವ ಡೈನಾಮಿಕ್ ಲೀಡರ್ ನಾಯಕರಾಗಿ ಅವರನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ .ಕಲ್ಬುರ್ಗಿ ಜಿಲ್ಲೆಗೆ ವಿಶೇಷವಾಗಿ ಅಭಿವೃದ್ಧಿ ಆಗುತ್ತಿರುವುದನ್ನು ಹಾಗೂ ಉದ್ಯೋಗ ಮೇಳ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಮಾಡುತ್ತಿರುವುದನ್ನು ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಜನಪ್ರಿಯತೆ ಕುಗ್ಗಿಸುವ ಬಿಜೆಪಿ ಹಾಗೂ ಆರ್‌ಎಸ್‌ಎಸ್ ತಂತ್ರ ಫಲಿಸದು ಎಂದು ಅವರು ಹೇಳಿದ್ದಾರೆ.
ಖರ್ಗೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮೂಲಕ ವೈಯಕ್ತಿಕ ದಾಳಿಗಿಳಿದಿವೆ. ಆದರೆ, ಜನಪರ ಕಾಳಜಿಯುಳ್ಳ ಸಚಿವ ಹಾಗೂ ಡೈನಾಮಿಕ್ ನಾಯಕರೊಬ್ಬರನ್ನು ತೇಜೋವಧೆ ಮಾಡುತ್ತಿರುವ ಬಿಜೆಪಿಯ ಕುತಂತ್ರ ಇದಾಗಿದೆ ಎಂದು ಹರಿಹಾಯ್ದಿದ್ದಾರೆ.