6:47 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕಲಾತ್ಮಕತೆ ಹಾಗೂ ಸೂಕ್ಷ್ಮ ಅಭಿವ್ಯಕ್ತಿ ತೇಜಸ್ವಿ ಕಥೆಗಳ ವಿಶೇಷ: ಡಾ. ಸುಧಾ ಎ.ಆರ್. ಅಭಿಮತ

23/11/2021, 10:29

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಲಾತ್ಮಕತೆ ಹಾಗೂ ಸೂಕ್ಷ್ಮ ಅಭಿವ್ಯಕ್ತಿ ತೇಜಸ್ವಿ ಕಥೆಗಳ ವಿಶೇಷ ವಿಶೇಷವಾಗಿದೆ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಸುಧಾ ಎ.ಆರ್.ಹೇಳಿದರು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಹುಲಿಯೂರಿನ ಸರಹದ್ದು ಕೃತಿಯ ಬಗ್ಗೆ ಮಾತನಾಡಿದರು.

ಹುಲಿಯೂರಿನ ಸರಹದ್ದು ಕೃತಿಯಲ್ಲಿನ ಕಥೆಗಳು ಹಲವು ದಶಕಗಳ ಹಿಂದೆ ಬರೆದ ಕಥೆಗಳಾಗಿದ್ದರೂ ಕೂಡ ಈ ಕಥೆಗಳ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ವಿಭಿನ್ನ ಕಥಾವಸ್ತುವಿನ ಮೂಲಕ ಸಮಾಜವನ್ನು ತಿದ್ದುವ ವಿಚಾರಗಳೊಂದಿಗೆ ಈ ಕೃತಿಗಳ ಕಥೆಗಳು ಒಡಮೂಡಿವೆ ಎಂದರು.

ಅಪ್ಪಟ ಸಂಶೋಧಕನಾಗಿ, ಅನ್ವೇಷಕನಾಗಿ, ಲೇಖಕನಾಗಿ ಹಲವಾರು ಹೊಸತುಗಳಿಗೆ, ಮೊದಲುಗಳಿಗೆ ಕಾರಣರಾದವರು ತೇಜಸ್ವಿ ಅವರು. ಯುವ ಪೀಳಿಗೆಯ ಮೇಲೆ ತೇಜಸ್ವಿ ಅವರ ಪ್ರಭಾವ ಅಪಾರ. ಬದುಕಿದಂತೆ ಬರೆದ, ಬರೆದಂತೆ ಬದುಕಿದ ತೇಜಸ್ವಿ ತಮ್ಮ ಕೃತಿಗಳ ಮೂಲಕ ಜನರಿಗೆ ಹತ್ತಿರವಾದಂತೆ ತಮ್ಮ ವ್ಯಕ್ತಿತ್ವದ ಮೂಲಕವೂ ಜನಮನಕ್ಕೆ ಆಪ್ತರಾದವರು ಎಂದರು.

ಈ ಸಂದರ್ಭದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಲೇಖಕ ಪೂರ್ಣೆಶ್ ಮತ್ತಾವರ, ಪ್ರತಿಷ್ಠಾನದ ಸಿಬ್ಬಂದಿ ಸತೀಶ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು