ಇತ್ತೀಚಿನ ಸುದ್ದಿ
ಕಳಸ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ದಾರುಣ ಸಾವು
14/02/2026, 19:28
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರ ಸಾವನ್ನಪ್ಪಿದ್ದಾರೆ.
ಅಭಿಷೇಕ್ (27) ಮತ್ತು ಯೋಗೀಶ್ (17) ಮೃತ ದುರ್ದೈವಿಗಳು.
ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ.
ಮೃತರಿಬ್ಬರು ಮೂಲತಃ ಕೊಡಗು ಜಿಲ್ಲೆಯವರಾಗಿದ್ದಾರೆ.
ಅಭಿಷೇಕ್ ಅಕ್ಕನ ಮನೆಗೆ ಬಂದಿದ್ದಾಗ ಭದ್ರಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಮೃತ ಅಭಿಷೇಕ್ ಅಕ್ಕ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಯುವಕರ ಶವಕ್ಕಾಗಿ ಕಳಸ
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳಿಯರಿಂದ ಶೋಧ ನಡೆಸುತ್ತಿದ್ದಾರೆ.












