ಇತ್ತೀಚಿನ ಸುದ್ದಿ
ಕಲಬುರಗಿಯ ಮಲ್ಲಾಬಾದ್: ಮಲಗಿದ್ದ ಮಹಿಳೆಯ ಮೈ ಏರಿ ಹೆಡೆ ಬಿಚ್ಚಿ ಕುಳಿತ ನಾಗರಹಾವು!!
27/08/2022, 22:40
ಮುತ್ತಪ್ಪ ಬಸವರಾಯ ಪಡಸಾಲಗಿ ಕಲಬುರಗಿ
info.reporterkarnataka.com
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಮಲಗಿದ್ದ ಮಹಿಳೆಯೊಬ್ಬರ ಮೈಮೇಲೆ ಏರಿ ನಾಗರಹಾವೊಂದು ಹೆಡೆ ಎತ್ತಿ ಕುಳಿತ ಅಚ್ಚರಿಯ ಭಯಾನಕ ಘಟನೆ ನಡೆದಿದೆ. ಭಾಗಮ್ಮ ಬಡದಾಳ್ ಎಂಬುವರ ಜಮೀನಿನಲ್ಲಿ ಈ ಘಟನೆ ಜರುಗಿದೆ.
ಭಾಗ್ಯಮ್ಮ ಅವರು ತಮ್ಮ ಜಮೀನಿನಲ್ಲಿ ಪಡಿಮಂಚದ ಮೇಲೆ ಮಲಗಿದ್ದಾಗ ನಾಗರಹಾವೊಂದು ಸರಕ್ಕನೆ ಅವರ ಮೈಮೇಲೆ ಏರಿ ಹೆಡೆ ಎತ್ತಿ ಕುಳಿತೇ ಬಿಟ್ಟಿತು. ಹಾವು ಕೆಲವು ನಿಮಿಷಗಳ ಕಾಲ ಹಾಗೆ ಮೈಮೇಲೆ ಹೆಡೆಎತ್ತಿ ಕುಳಿತು ಬಿಟ್ಟಿತ್ತು. ಭಾಗ್ಯಮ್ಮ ಅವರು ಭಯದಲ್ಲಿ ಮೈಯನ್ನು ಕೊಡವಿ ಕೊಳ್ಳದೆ ಕ್ಷೀಣ ಸ್ವರದಲ್ಲಿ ಕೂಗುತ್ತಿದ್ದರು. ನಂತರ ಹಾವು ಇಳಿದು ಹೋಯಿತು.