ಇತ್ತೀಚಿನ ಸುದ್ದಿ
ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ ಮೌನ ಧರಣಿ
07/08/2025, 11:20

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ
ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ ಮೌನ ಧರಣಿ ನಡೆಸಲಾಯಿತು.
ದಲಿತ ಸಂಘರ್ಷ ಸಮಿತಿ, ಪ್ರಗತಿಪರರು, ರೈತ ಸಂಘದಿಂದ ಪ್ರಾಯಶ್ಚಿತ್ತ ಮೌನ ಪ್ರತಿಭಟನೆ ಜರುಗಿತು.
ಶಾಸಕಿ ನಯನಾ ಮೋಟಮ್ಮ ಗೆಲುವಿಗೆ ಶ್ರಮಿಸಿ ತಪ್ಪು ಮಾಡಿದ್ದೇವೆಂದು ಪ್ರಾಯಶ್ಚಿತ್ತ ಮೌನ ಧರಣಿ ನಡೆಸಲಾಯಿತು.
ಚಿಕ್ಕಮಗಳೂರು ನಗರದ ಕೋರ್ಟ್ ಆವರಣದಲ್ಲಿರುವ
ಗಾಂಧಿ ಪ್ರತಿಮೆ ಎದುರು ದಲಿತ ಸಂಘ, ಪ್ರಗತಿಪರರು, ರೈತರು ಮೌನ ಧರಣಿ ನಡೆಸಿದರು.
ಕೇಸರಿ ಶಾಲು ತೊಟ್ಟು ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ನಯನಾ ಮೋಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಕೇಸರಿ ಶಾಲು ತೊಟ್ಟು 3 ವರ್ಷ ಆದ ಮೇಲೆ ಬಿಜೆಪಿ ಹೋಗ್ತೀನೋ… ಕಾಂಗ್ರೆಸ್ಸಲ್ಲೇ ಇರ್ತಿನೋ ಗೊತ್ತಿಲ್ಲ ಎಂದಿದ್ದ ನಯನಾ ಮೋಟಮ್ಮ.
ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದರು.
ಅನ್ಯ ಧರ್ಮದ ಮೇಲೆ ದ್ವೇಷ ಕಾರುವ ಪ್ರಮೋದ್ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಪ್ರತಿಭಟನಾಕಾರರು
ಆಕ್ರೋಶ ವ್ಯಕ್ತಪಡಿಸಿದ್ದಾರೆ.
48ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿರೋ ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಕಿಡಿ ಕಾರಿದ್ದಾರೆ.
ಇಂತವರ ಗೆಲುವಿಗೆ ಶ್ರಮಿಸಿದ್ವಲ್ಲಾ ಅಂತ ಗಾಂಧಿ ಪ್ರತಿಮೆ ಎದುರು ಪ್ರಾಯಶ್ಚಿತ್ತ ಮಾಡಿಕೊಂಡರು.
ಅವರಿಗೆ ಮತ ಹಾಕಿ, ಹಾಕಿಸಿ ತಪ್ಪು ಮಾಡಿದ್ದೇವೆಂದು ನೊಂದು ಗಾಂಧಿ ಎದುರು ಪ್ರಾಯಶ್ಚಿತ್ತ ಮೌನ ಧರಣಿ ನಡೆಸಿದರು.
ನಯನಾ ಮೋಟಮ್ಮ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ.