ಇತ್ತೀಚಿನ ಸುದ್ದಿ
ಕಡೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ: ನೇರಳೆ ಹಣ್ಣು ಕೀಳಲು ಮರ ಏರಿದ ಬಾಲಕ ವಿದ್ಯುತ್ ಶಾಕ್ ಗೆ ಬಲಿ
15/06/2024, 15:28
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿದ್ಯುತ್ ಶಾಕ್ ನಿಂದ 7ನೇ ತರಗತಿ ಬಾಲಕ ಸಾವನ್ನಪ್ಪಿದ ದಾರುಣ ಘಟನೆ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಆಕಾಶ್ (13) ಎಂದು ಗುರುತಿಸಲಾಗಿದೆ. ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಶಾಲೆ ಆವರಣದ ನೇರಳೆ ಮರಕ್ಕೆ ಹಣ್ಣು ಕೀಳಲು ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಮರದಿಂದ ಜಾರಿ ಬೀಳುವಾಗ ವಿದ್ಯುತ್ ತಂತಿ ಹಿಡಿದ ಬಾಲಕ ಆಕಾಶ್ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದಿದ್ದ. ತಕ್ಷಣ ಬಾಲಕನ ಆಸ್ಪತ್ರೆಗೆ ದಾಖಲಿಸಿದರೂ
ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.