ಇತ್ತೀಚಿನ ಸುದ್ದಿ
ಕಡೂರಿಗೆ ಆಗಮಿಸಿದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ: ಮೊಮ್ಮಗ ಪ್ರಜ್ವಲ್ ಪರ ಪ್ರಚಾರ
15/03/2024, 15:07
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಲು ಕಡೂರಿಗೆ ಆಗಮಿಸಿದರು.
ಮಾಜಿ ಪ್ರಧಾನಿ ಎಚ್ಡಿಡಿಗೆ ಬೃಹತ್ ಹಾರ ಹಾಕಿ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದರು.
ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಡೂರು ಬರುವುದರಿಂದ ಮಾಜಿ ಪ್ರಧಾನಿ ಇಲ್ಲಿ ಪ್ರಚಾರ ನಡೆಸಿದರು. ನಂತರ ಜೆಡಿಎಸ್-ಬಿಜೆಪಿ ಕಾರ್ಯಕರ್ಯರ ಸಭೆಯಲ್ಲಿ ದೇವೇಗೌಡ ಭಾಗವಹಿಸಿದರು.
ಕಡೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು.