5:58 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕದ್ರಿ ಶಿವಭಾಗ್: ಏಪ್ರಿಲ್ 12ರಂದು ರೋಹನ್ ಗಾರ್ಡನ್ ಭೂಮಿಪೂಜೆ

10/04/2025, 21:59

ಮಂಗಳೂರು(reporterkarnataka.com): ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಗೂ ಮಿಕ್ಕಿ ಸೇವೆ ನೀಡುತ್ತಿರುವ ರೋಹನ್ ಕಾರ್ಪೋರೇಶನ್, ತನ್ನ ಮತ್ತೊಂದು ವಸತಿ ಸಮುಚ್ಚಯ ‘ರೋಹನ್ ಗಾರ್ಡನ್’ ಯೋಜನೆಯ ಭೂಮಿಪೂಜೆಯನ್ನು, 2025ರ ಏಪ್ರಿಲ್ 12ರ ಶನಿವಾರ ಸಂಜೆ 5:00 ಗಂಟೆಗೆ ನಡೆಸಲಿದೆ.


ಕದ್ರಿ -ಶಿವಬಾಗ್, ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ವಸತಿ ಸಮುಚ್ಚಯ ಪ್ರಕೃತಿ ಮತ್ತು ಅನುಕೂಲತೆಗಳ ಸಮ್ಮಿಲನವಾಗಿದೆ.
ರೋಹನ್ ಗಾರ್ಡನ್ ಐಶಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸಯೋಗ್ಯ ವ್ಯವಸ್ಥೆಯನ್ನು ಒದಗಿಸುವ ಆಧುನಿಕ ವಸತಿ ಸಮುಚ್ಚಯವಾಗಿದೆ. ಐದು ಅಂತಸ್ತುಗಳ ಈ ಕಟ್ಟಡದಲ್ಲಿ 28 ಸುಂದರವಾಗಿ ವಿನ್ಯಾಸಗೊಳಿಸಲಾದ ಅಪಾರ್ಟ್‌ಮೆಂಟ್‌ಗಳು ಇದ್ದು, ಇದು ಆರಾಮ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಜಿಮ್ನೇಶಿಯಂ, 24/7 ಸಿಸಿಟಿವಿ ಮತ್ತು ಸ್ಮಾರ್ಟ್ ಸೆನ್ಸರ್ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಪಾರ್ಕಿಂಗ್, ಮಕ್ಕಳ ಆಟದ ಸ್ಥಳ ಮತ್ತು ಹಿರಿಯರಿಗಾಗಿ ವಿಶ್ರಾಂತಿ ಸ್ಥಳಗಳೂ ಇವೆ. ಫೈರ್ ಫೈಟಿಂಗ್ ವ್ಯವಸ್ಥೆ, ವೀಡಿಯೋ ಡೋರ್ ಫೋನ್ ಮತ್ತು ಎ.ಆರ್.ಡಿ. ಅಟ್ಯಾಚ್ಡ್ ಲಿಫ್ಟ್’ಗಳ ಸುರಕ್ಷತೆಯನ್ನು ಒದಗಿಸಿದೆ. ರೋಹನ್ ಗಾರ್ಡನ್ ನಗರದ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕವನ್ನು ಹೊಂದಿರುವುದಲ್ಲದೆ, ಶಾಂತ ಮತ್ತು ಹಸಿರು ಪರಿಸರದ ಅನುಭವವನ್ನು ನೀಡಲಿದೆ.
ಈ ಯೋಜನೆಯು 1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿ.ಎಚ್.ಕೆ. ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಅಪಾರ್ಟ್‌ಮೆಂಟ್‌ ವಿಟ್ರಿಫೈಡ್ ಫ್ಲೋರಿಂಗ್, ಪ್ರೀಮಿಯಂ ಸ್ಯಾನಿಟರಿ ವೇರ್ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದೆ. ವಿಶಾಲವಾದ ಒಳಾಂಗಣ, ಸೊಗಸಾದ ಬಾಲ್ಕನಿಗಳು, ಮತ್ತು ಸಮಕಾಲೀನ ವಾಸ್ತುಶಿಲ್ಪವನ್ನು ಹೊಂದಿದೆ.
ಕರಾವಳಿ ಕರ್ನಾಟಕದಾದ್ಯಂತ 30ಕ್ಕೂ ಮಿಕ್ಕಿ ಯಶಸ್ವಿ ಯೋಜನೆಗಳನ್ನು ನಿರ್ಮಿಸಿರುವ ರೋಹನ್ ಕಾರ್ಪೋರೇಶನ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಿದೆ. ರೋಹನ್ ಗಾರ್ಡನ್‌ ಯೋಜನೆಯು – ನವೀನತೆ, ಗುಣಮಟ್ಟ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದ್ದು, ತನ್ನ ಗ್ರಾಹಕರಿಗ ಅತ್ತ್ಯುತ್ತಮ ವಾಸ ಯೋಗ್ಯ ಅನುಭವವನ್ನು ನೀಡಲಿದೆ.
ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100, ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು