ಇತ್ತೀಚಿನ ಸುದ್ದಿ
ಕದ್ರಿ ಮಂಜುನಾಥ ದೇವಸ್ಥಾನ ಆಡಳಿತವನ್ನು ಕದ್ರಿ ಯೋಗೀಶ್ವರ ಮಠದ ಸಮಿತಿಗೆ ಒಪ್ಪಿಸಿ: ಮಾಜಿ ಮೇಯರ್ ಹರಿನಾಥ್
17/01/2022, 16:00
ಮಂಗಳೂರು(reporterkarnataka.com): ನಗರದ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನದ ಆಡಳಿತವನ್ನು ಕದ್ರಿ ಯೋಗೀಶ್ವರ ಮಠದಲ್ಲಿರುವ ಸಮಿತಿಗೆ ಒಪ್ಪಿಸಬೇಕೆಂದು ಮಾಜಿ ಮೇಯರ್ ಹಾಗೂ ಕದ್ರಿ ಯೋಗೀಶ್ವರ ಮಠದ ಅಧ್ಯಕ್ಷ ಹರಿನಾಥ್ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಇಲಾಖಾ ಮಂತ್ರಿಗಳು ಎಲ್ಲಾ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳನ್ನು ಆಯಾಯ ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತವನ್ನು ಕದ್ರಿ ಮಠದಲ್ಲಿರುವ ಸಮಿತಿಗೆ ಒಪ್ಪಿಸಬೇಕು. ಕದ್ರಿ ದೇವಸ್ಥಾನ ಮತ್ತು ಕದ್ರಿ ಮಠಕ್ಕೆ ಮೊದಲಿನಿಂದಲೂ ಉತ್ತಮ ಸಂಬಂಧವಿದೆ. ಈ ಹಿಂದೆ ನಮ್ಮ ಮಠಕ್ಕೆ ಸಂಬಂಧಪಟ್ಟಿತ್ತು. ಸರ್ಕಾರ ಅಂತಹ ನಿರ್ಧಾರ ಮಾಡಿದರೆ ಅದರ ಮೊದಲ ಹಕ್ಕುದಾರರು ನಾವಾಗಿರುತ್ತೇವೆ. ಆದಕ್ಕೆ ದಾಖಲೆ-ಇತಿಹಾಸ ಇದೆ ಎಂದರು.
ಸರ್ಕ್ಯೂಟ್ ಹೌಸ್‌ನಿಂದ ಪದವು ಹೈಸ್ಕೂಲ್‌ವರೆಗಿನ ಜೋಗಿ ಮಠದ ರಸ್ತೆ ಎಂದು ನಾಮಕರಣ ಮಾಡಿತ್ತು. ಆದರೆ ಸ್ಮಾರ್ಟ್ ಸಿಟಿಯ ಕೆಲಸದ ವೇಳೆ ಆ ಫಲಕವನ್ನು ಕಿತ್ತು ಬಿಸಾಡಿದ್ದಾರೆ ಎಂದು ಆರೋಪಿಸಿದ್ದಾರೆ.