6:20 PM Friday11 - April 2025
ಬ್ರೇಕಿಂಗ್ ನ್ಯೂಸ್
Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:…

ಇತ್ತೀಚಿನ ಸುದ್ದಿ

ಕದ್ರಿ ದಕ್ಷಿಣ ವಾರ್ಡ್: 1 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್  ಭೂಮಿಪೂಜೆ

21/05/2022, 19:33

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ದಕ್ಷಿಣ ವಾರ್ಡಿನಲ್ಲಿ 1 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.

ಈ ಕುರಿತು ಮಾತನಾಡಿದ ಅವರು, ಕದ್ರಿ ಹಿಂದೂ ರುದ್ರಭೂಮಿಯಿಂದ ಕದ್ರಿ ರಾಕ್ಸ್ ವರೆಗೆ ರಾಜಕಾಲುವೆಯ ತಡೆಗೋಡೆ ಅಭಿವೃದ್ಧಿಗೆ ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಯನ್ನು ಮನಗಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು. 

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಶಕಿಲಾ ಕಾವಾ, ಪ್ರಮುಖರಾದ ದಿನೇಶ್ ದೇವಾಡಿಗ, ಶ್ರೀಕಾಂತ್ ರಾವ್, ಶಾಲಿನಿ ವಿಶ್ವನಾಥ್ ಆಚಾರ್, ಕೃಷ್ಣ ಶೆಟ್ಟಿ, ವಸಂತ್ ಜೆ ಪೂಜಾರಿ, ದೇವಿಚರಣ್ ಶೆಟ್ಟಿ, ಮನೀಷ್ ಪಾಂಡ್ಯ, ಗೋಪಾಲ ಕೃಷ್ಣ ರಾವ್, ತುಳಸಿದಾಸ್ ಕದ್ರಿ, ಪ್ರದೀಪ್ ಆಚಾರ್ಯ, ಸೋಮನಾಥ್ ದೇವಾಡಿಗ, ಯಶವಂತ ನಾಯಕ್, ಗಾಡ್ವಿನ್,‌ಕೇಶವ ಕದ್ರಿ,‌ಪ್ರಕಾಶ್, ಚಂದ್ರಕಾಂತ್, ಜಗದೀಶ್ ಕದ್ರಿ, ಅವಿನಾಶ್ ರೈ, ಹೇಮಚಂದ್ರ, ಸಚಿನ್ ಕದ್ರಿ, ಕೌಶಿಕ್, ವಿವೇಕ್ ಕದ್ರಿ, ವಿನಯ್ ಕದ್ರಿ, ದಿವಾಕರ್ ಕದ್ರಿ, ಶಿವಪ್ಪ ನಂತೂರು, ರಂಜನ್, ಸತ್ಯನಾರಾಯಣ ರಾವ್, ನರೇಶ್ ರಾವ್, ವಿಜಯ್ ಭಂಡಾರಿ, ಸಂಜೀವ ಅಡ್ಯಾರ್, ವೆಂಕಟೇಶ್, ಕೌಶಿಕ್, ಅನಂತ್ ಅಂಚನ್, ನಾಗೇಶ್ ಕದ್ರಿ, ರವಿ, ದಿನೇಶ್ ದೇವಾಡಿಗ ಕಂಬ್ಳ, ರಾಘವೇಂದ್ರ ಬಿರ್ವತ್ತಾಯ, ಭೋಜ, ಜನಾರ್ದನ, ಸುನಿಲ್, ಅನಿಲ್, ದೀಪಕ್, ಅರುಣ್ ಕದ್ರಿ, ರೋಷನ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು