ಇತ್ತೀಚಿನ ಸುದ್ದಿ
ಕಡೂರು: ರಾತೋರಾತ್ರಿ ಬೈಕ್ ಎಗರಿಸುತ್ತಿದ್ದ ಕತರ್ನಾಕ್ ಕಳ್ಳನ ಬಂಧನ; 11 ಬೈಕ್ ವಶ
26/12/2022, 11:08

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾತ್ರೋ ರಾತ್ರಿ ಬೈಕ್ ಎಗರಿಸುತ್ತಿದ್ದ ಕತರ್ನಾಕ್ ಕಳ್ಳನನ್ನು ಬಂಧಿಸಲಾಗಿದೆ. ಕಡೂರು ತಾಲ್ಲೂಕಿನ ಶೆಟ್ಟಿಹಳ್ಳಿಯ ಮೋಹನ್ ಬಂಧಿತ ಆರೋಪಿ.
ಬಂಧಿತನಿಂದ 4 ಲಕ್ಷ ಮೌಲ್ಯದ 11 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಹಿನ್ನೆಲೆ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ತನಿಖೆ ವೇಳೆ ಬೆಂಗಳೂರು, ತುಮಕೂರು ಸೇರಿ ವಿವಿದ ಜಿಲ್ಲೆಯ 11 ಪ್ರಕರಣ ಬಯಲಾಗಿದೆ.ಬೈಕ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಆರೋಪಿ
ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.ಕಡೂರು ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.