ಇತ್ತೀಚಿನ ಸುದ್ದಿ
ಕಡಲನಗರಿಯಲ್ಲೊಂದು ಹೃದಯ ವಿದ್ರಾವಕ ಘಟನೆ: ಅಸ್ವಸ್ಥ ಪತ್ನಿ ಮಲಗಿದಲ್ಲೇ ಸಾವು; ಪಕ್ಕದ ಕೊಠಡಿಯಲ್ಲಿ ಪತಿ ನೇಣಿಗೆ ಶರಣು
28/01/2023, 16:53

ಮಂಗಳೂರು(reporterkarnataka.com): ಕೆಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದ ವೃದ್ದ ಮಹಿಳೆಯೊಬ್ಬರು ಮಲಗಿದಲ್ಲೇ ಸಾವನ್ನಪ್ಪಿದ್ದು, ಪಕ್ಕದ ಕೊಠಡಿಯಲ್ಲಿ ಆಕೆಯ ಪತಿ ಆತ್ಯಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಶೈಲಜಾ(64) ಮಲಗಿದ್ದಲ್ಲೇ ಸಾವನ್ನಪ್ಪಿ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಪತಿ ದಿನೇಶ್ ರಾವ್ (65)ಅವರು ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ನಗರದ ಬಿಜೈ ಕಾಪಿಕಾಡ್ ನ
ಅಪಾರ್ಟ್ ಮೆಂಟ್ ವೊಂದರಲ್ಲಿ ಶನಿವಾರ ದಂಪತಿಯ ಮೃತದೇಹ ಪತ್ತೆಯಾಗಿದೆ. ಇವರ ಇಬ್ಬರು ಪುತ್ರಿಯರು ಅಮೆರಿಕದಲ್ಲಿ ವಾಸವಾಗಿದ್ದಾರೆ.
ಒಂದು ಮೂಲಗಳ ಪ್ರಕಾರ ಪತಿ ದಿನೇಶ್ ರಾವ್ ಅವರು ಪತ್ನಿ ಶೈಲಜಾ ಅವರನ್ನು ಉಸಿರು ಕಟ್ಟಿಸಿ ಕೊಲೆ ಮಾಡಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ದಿನೇಶ್ ರಾವ್ ಅವರು ತನ್ನ ಪತ್ನಿಯ ಸ್ಥಿತಿ ಯನ್ನು ಕಂಡು ಖಿನ್ನರಾಗಿ ಮೊದಲು ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಉರ್ವ ಠಾಣೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ.