8:04 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ಗರಿಗೆದರಿದ ಚಟುವಟಿಕೆ:  ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಆರಂಭ

26/07/2022, 12:24

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಕರಾವಳಿಯಲ್ಲಿ ಸುಮಾರು 2 ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೀನುಗಾರಿಕೆ ಆಗಸ್ಟ್ 1ರಂದು ಮತ್ತೆ ಆರಂಭಗೊಳ್ಳಲಿದ್ದು, ಮೀನುಗಾರರು ಭರದ ಸಿದ್ಧತೆ ನಡೆಸಿದ್ದಾರೆ.

ಪ್ರಸ್ತುತ ಮೀನುಗಾರಿಕೆ ಹಂಗಾಮದಲ್ಲಿ ಉತ್ತಮ ಫಸಲಿನ ನಿರೀಕ್ಷೆಯೊಂದಿಗೆ ಕಡಲಿಗಿಳಿಯಲು ಮೀನುಗಾರರು ಸಿದ್ಧತೆ ಮಾಡಿಕೊಂಡಿದ್ದಾರೆ. ಸಮುದ್ರದಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿ ದೊರೆಯುವಂತೆ ಮತ್ತು ಯಾವುದೇ ಅವಘಢ ಸಂಭವಿಸದಂತೆ ಸಮುದ್ರರಾಜ ಹಾಗೂ ತಮ್ಮ ಇಷ್ಟದೇವರಲ್ಲಿ ಮೊರೆ ಹೋಗಿದ್ದಾರೆ.

ಮೀನು ಮೊಟ್ಟೆ ಇಡುವ ಸಮಯದಲ್ಲಿ ಮೀನುಗಾರಿಕೆಗೆ ಕರಾವಳಿಯಲ್ಲಿ ನಿಷೇಧವಿರುತ್ತದೆ. ಕಡಲಿನಲ್ಲಿ ಮತ್ಸ್ಯ ಸಂಪತ್ತಿನ ವೃದ್ಧಿಯ ಆಶಯ ಈ ನಿಷೇಧದ ಉದ್ದೇಶವಾಗಿದೆ. ಮೀನುಗಾರಿಕೆ ಸ್ಥಗಿತ ಸಮಯದಲ್ಲಿ ಯಾಂತ್ರೀಕೃತ ದೋಣಿಯ ಮೂಲಕ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ನಾಡದೋಣಿ ಮೂಲಕ ಸಮುದ್ರ ಮೀನುಗಾರಿಕೆಗೆ ಅವಕಾಶವಿರುತ್ತದೆ.

ಮೀನುಗಾರಿಕೆ ನಿಷೇಧ ಸಮಯದಲ್ಲಿ ಸಾಮಾನ್ಯವಾಗಿ ಮೀನಿನ ರೇಟ್ ಜಾಸ್ತಿಯಾಗುತ್ತದೆ. ಕೆಜಿಗೆ 200 ರೂಪಾಯಿಗೆ ಸಿಗುವ ಬಂಗುಡೆ ಮೀನು ಕೆಜಿಗೆ 400ರಿಂದ 450 ರೂಪಾಯಿ ಆಗುತ್ತದೆ. ಉಳಿದ ಮೀನಿನ ಮಾರುಕಟ್ಟೆ ಮೌಲ್ಯ ಕೂಡ ಡಬಲ್ ಆಗುತ್ತದೆ. ಆಳ ಸಮುದ್ರ ಮೀನುಗಾರಿಕೆ ನಿಷೇಧ ಸಮಯದಲ್ಲಿ ನದಿ, ಹೊಳೆ, ತೋಡು, ಕೆರೆ ಮೀನುಗಾರಿಕೆಗೆ ಬಹಳ ಬೇಡಿಕೆ ಇರುತ್ತದೆ. ಹೊಳೆ ಮೀನು ಪ್ರಿಯರ ಸಮುದಾಯವೇ ಕರಾವಳಿಯಲ್ಲಿದೆ. 

ಸಮುದ್ರದಲ್ಲಿ ಆಳ ಮೀನುಗಾರಿಕೆಯ ಯಾಂತ್ರೀಕೃತ

ದೋಣಿಗಳಲ್ಲಿ ದುಡಿಯುವವರಲ್ಲಿ ಬಹುಪಾಲು ಆಂಧ್ರ, ಒಡಿಶಾ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಮೀನುಗಾರಿಕೆ ನಿಷೇಧ ಇರುವುದರಿಂದ ಅವರೆಲ್ಲ

ರಜೆಯಲ್ಲಿ ಊರಿಗೆ ತೆರಳಿದ್ದಾರೆ. ಆದರೆ ಮೀನುಗಾರಿಕೆ ಶುರುವಾಗುವ ದಿನ ಹತ್ತಿರ ಬರಲಾರಂಭಿಸಿರುವುದರಿಂದ ಅವರು ಮತ್ತೆ

ಮಂಗಳೂರಿನತ್ತ ಮುಖ ಮಾಡಿದ್ದಾರೆ.

ಜು. 31ಕ್ಕೆ ಐಸ್ ಪ್ಲಾಂಟ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಿದೆ. ಮೀನುಗಾರಿಕೆಗೆ ಬೋಟುಗಳನ್ನು, ಎಂಜಿನ್ ಗಳನ್ನು ದುರಸ್ತಿಗೊಳಿಸಿ ಹಾಗೂ ಬಲೆಗಳನ್ನು ಸಿದ್ಧಗೊಳಿಸುವ ಕಾರ್ಯ ನಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು