9:30 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಬೆಳ್ತಂಗಡಿ ಶಾಖೆ ಶೀಘ್ರದಲ್ಲಿ ಆರಂಭ

28/08/2025, 12:49

ಮಂಗಳೂರು(reporterkarnataka.com): ನಗರದ ಬೆಂದೂರ್‌ವೆಲ್ ನಲ್ಲಿ ಕೇಂದ್ರ ಕಛೇರಿ ಹೊಂದಿರುವ ಕಚ್ಚೂರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಇದರ ಬೆಳ್ತಂಗಡಿ ಶಾಖೆಯು ಶೀಘ್ರದಲ್ಲಿ ಅಂದರೆ ಮುಂದಿನ ನವರಾತ್ರಿ ದಸರಾ ದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿಯ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಸೊಸೈಟಿಯ ಶಾಖೆಯು ಮಂಗಳೂರು, ಸುರತ್ಕಲ್, ಉಡುಪಿ ಹಾಗೂ ಬಂಟ್ವಾಳದಲ್ಲಿದ್ದು, ನೂತನ ಶಾಖೆಯನ್ನು ಬೆಳ್ತಂಗಡಿ ಚರ್ಚ್ ರೋಡ್ ಹತ್ತಿರ ನೊರೊನ ಕಾಂಪ್ಲೆಕ್ಸ್ ನಲ್ಲಿ ತೆರೆಯಲು ಸಜ್ಜಾಗಿದೆ. 30 ವರ್ಷಗಳ ವಿಶ್ವಾಸಾರ್ಹ ಸೇವೆ ಮಾಡುತ್ತಾ ಬಂದಿರುವ ಸೊಸೈಟಿಯು ಸತತ ಲಾಭ ಗಳಿಕೆಯೊಂದಿಗೆ, ಸದಸ್ಯರಿಗೆ ಸತತ 20% ಡಿವಿಡೆಂಡ್ ನೀಡುತ್ತಾ ಬರುತ್ತಿದೆ. ಸರ್ಕಾರದ ಅಡಿಟ್ ವರ್ಗೀಕರಣದಲ್ಲಿ ಸತತ ‘ಎ’ವರ್ಗ ಪಡೆಯುವುದರೊಂದಿಗೆ ಉತ್ತಮ ಅಭಿವೃದ್ಧಿಗೆ ಎಸ್ ಡಿ ಸಿ ಸಿ ಬ್ಯಾಂಕ್ ಸಾಧನ ಪ್ರಶಸ್ತಿಯನ್ನು ಸತತ ಪಡೆಯುತ್ತಾ ಬರುತ್ತಿದೆ.
ಎಲ್ಲಾ ಶಾಖೆಗಳು ಕಂಪ್ಯೂಟರಿಕೃತ ಲೆಕ್ಕಪತ್ರವ್ಯವಸ್ಥೆ ಎಲ್ಲಾ ಭದ್ರತಾ ವ್ಯವಸೆಗಳೊಂದಿಗೆ ಗ್ರಾಹಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ನೀಡುತ್ತಾ ಬರುತ್ತಿದೆ. ಬೆಳ್ತಂಗಡಿ ಶಾಖೆಯು ಆರಂಭದ ಕೊಡುಗೆಯಾಗಿ ಸಾಮಾನ್ಯ ಠೇವಣಿ 1 ವರ್ಷಕ್ಕೆ 8.50%, 2 ವರ್ಷಕ್ಕೆ 9%, 3 ವರ್ಷಕ್ಕೆ 9.50% ಹಾಗೂ ಹಿರಿಯ ನಾಗರಿಕರಿಗೆ 1 ವರ್ಷಕ್ಕೆ 9%, 2 ವರ್ಷಕ್ಕೆ 9.50%, 3 ವರ್ಷಕ್ಕೆ 10% ನೀಡುತ್ತಿದ್ದು ಗ್ರಾಹಕ ಬಂಧುಗಳು ಕೆಲವೇ ದಿನಗಳ ಅವಧಿ ನೀಡುವ ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳಲು ಸೊಸೈಟಿಯ ಪ್ರಕಟಣೆಯಲ್ಲಿ ಕೋರಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು