ಇತ್ತೀಚಿನ ಸುದ್ದಿ
ಕಬ್ಬಿನ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆಗಳಿಗೆ ಶೀಘ್ರದಲ್ಲೇ ಮುತ್ತಿಗೆ: ಶಶಿಕಾಂತ ಪಡಸಲಗಿ ಖಡಕ್ ಎಚ್ಚರಿಕೆ
16/07/2021, 18:50
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ರೈತರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬಂದರೆ ಅಂತಹುಗಳಿಗೆ ಬೀಗ ಜಡಿಯಲಾಗುವುದು.ರೈತರಿಗೆ ಸಕ್ಕರೆ ಕಾರ್ಖಾನೆಗಳು ಇನ್ನೂವರೆಗೂ ಬಿಲ್ ನೀಡಿಲ್ಲ.ಅಂತಹ ಕಾರ್ಖಾನೆಗಳಿಗೆ ಶೀಘ್ರದಲ್ಲೇ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ ರೈತರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಸರಿಯಾಗಿ ರಸ ಗೊಬ್ಬರಗಳು, ಬಿತ್ತನೆಯ ಬೀಜಗಳು ದೊರೆಯುತ್ತಿಲ್ಲ. ರಸ ಗೊಬ್ಬರಗಳನ್ನು ಎಂಆರಪಿ ದರಕ್ಕಿಂತ ಹೆಚ್ಚಿಗೆ ನೀಡುವುದು ಕಂಡು ಬಂದಿದೆ. ಸಂಬರಗಿ ಗ್ರಾಮದಲ್ಲಿ ಪ್ರಿಯ ವೈನ್ಸ್ ತೆರವು ಮಾಡಲು ರೈತ ಮುಖಂಡರು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರು ಸೇರಿ ಸುಮಾರು 1 ತಿಂಗಳಿಂದ ಶ್ರಮ ಪಟ್ಟು ಬೇಕಾದ ದಾಖಲಾತಿಗಳನ್ನು ಸಂಬಂಧ ಪಟ್ಟ ಅಧಿಖಾರಿಗಳಿಗೆ ಕೊಟ್ಟಿದ್ದು ಕೂಡಲೇ ವೈನ್ಸ್ ಶಾಪ್ ನ್ನ್ ತೆರವು ಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿರುವ ಎಲ್ಲ ರೈತರು ಸೇರಿ ಹೋರಾಟಕ್ಕೆ ಇಳಿವುದಾಗಿ ಎಚ್ಚರಿಕೆ ಕೊಟ್ಟರು.
ರೈತರು ಯಾವುದೇ ಜಾತಿ, ಭಾಷೆ, ಧರ್ಮ, ಶ್ರೀಮಂತ-ಬಡವ ಎಂಬ ಬೇಧ ಮಾಡದೇ ಒಗ್ಗಟ್ಟಾಗಿರಲು ಅವರು ಕರೆ ನೀಡಿದರು.