ಇತ್ತೀಚಿನ ಸುದ್ದಿ
ಕಾಪು: ಮನೆಗೆ ನುಗ್ಗಿ 4 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವುಗೈದ ಚೋರರು
10/12/2021, 14:09

ಕಾಪು(reporterkarnataka.com): ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಾಪುವಿನ ಏಣಗುಡ್ಡೆ ಗ್ರಾಮ ಅಚ್ಚಡ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜೋಸ್ ಫಿನ್ ಲೋಬೋ(75) ಎಂಬವ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸೆ.8ರಿಂದ ಅ.25ರ ಮಧ್ಯಾವಧಿಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಕಪಾಟಿನಲ್ಲಿ ಇಟ್ಟಿದ್ದ ರೋಪ್ ಚೈನ್, ಹವಳದ ಚೈನ್, ಸಾಧಾರಣ ಚೈನ್, ಒಂದು ಜೊತೆ ಬಳೆ, 4 ಉಂಗುರ, 3 ಜೊತೆ ಕಿವಿಯ ಓಲೆಯನ್ನು ಕಳವು ಮಾಡಿದ್ದಾರೆ. ಒಟ್ಟು ಕಳವಾದ 103 ಗ್ರಾಂ ತೂಕದ ಚಿನ್ನಾಭರಣಗಳ ಮೌಲ್ಯ 4,12,000 ರೂ. ಎಂದು ಅಂದಾಜಿಸಲಾಗಿದೆ.
ಲೋಬೊ ಹೊರಗಡೆ ಇರುವ ತನ್ನ ಮಕ್ಕಳಿಗೆ ವಿಷಯ ತಿಳಿಸಿ ಮನೆಯಲ್ಲಿ ಹುಡುಕಾಡಿದ ಹಿನ್ನೆಲೆಯಲ್ಲಿ ದೂರು ನೀಡಲು ವಿಳಂಬವಾಗಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.