ಇತ್ತೀಚಿನ ಸುದ್ದಿ
ಖಾಕಿ ಹಿಂದಿನ ಮಾನವೀಯ ಮುಖ: ಲಾಕ್ ಡೌನ್ ನಲ್ಲಿ ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತ ಎಸ್ಪಿ ವೇದಮೂರ್ತಿ
03/06/2021, 06:44
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಕೋವಿಡ್ ಸಮಯದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಕಿಟ್ ನೀಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಅವರು ಖಾಕಿ ಹಿಂದಿನ ತಾಯಿ ಹೃದಯವನ್ನು ತೆರೆದಿಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಪೊಲೀಸ್ ವರಿಷ್ಠ ಸಿ.ಬಿ. ವೇದಮೂರ್ತಿ ಅವರು ಯಾದಗಿರಿ ಜಿಲ್ಲಾ ಎಸ್ ಪಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಬ್ಬರ್ ಕೆಲಸ ಮಾಡುತ್ತಿರುವ ಬಡ ಕುಟುಂಬದ ಬುಡ ಜಂಗಮರಿಗೆ ವೇದಮೂರ್ತಿ ಅವರು, ಕೋವಿಡ್ ಸಮಯದಲ್ಲಿ ಯಾರು ಹೊರಗಡೆ ಬರಬೇಡಿ ಎಂದು ಅವರ ಜೀವನಕ್ಕೆ ಆಹಾರ ಕಿಟ್ ನೀಡುವುದರ ಮೂಲಕ ಮಾನವೀಯತೆ ತೋರಿದ್ದಾರೆ. ಇದು ರಾಜ್ಯಕ್ಕೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ. ಅವರು ರಾಯಚೂರು ಜಿಲ್ಲೆಯಲ್ಲೂ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ.
ಕೋವಿಡ್ ಸಮಯದ ಸಂಕಷ್ಟದಲ್ಲಿ ಪೊಲೀಸ್ ಅಧಿಕಾರಿ ಆಸರೆಯಾಗಿದ್ದು, ಪುಣ್ಯದ ಕೆಲಸವನ್ನು ಜಿಲ್ಲಾ ಎಸ್ಪಿ ಸಿ ಬಿ ವೇದಮೂರ್ತಿ ಮಾಡಿದ್ದಾರೆ ಎಂದು ಬುಡ ಜಂಗಮದ ಮುಖಂಡರು ಕೊಂಡಾಡುತ್ತಾರೆ.