8:43 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಕಾಡುಕೋಣ ದಾಳಿ: ಯುವ ರೈತ ಗಂಭೀರ ಗಾಯ; ಮಂಗಳೂರು ಆಸ್ಪತ್ರೆಗೆ ದಾಖಲು

10/04/2024, 20:49

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ, ದುರ್ಗದಹಳ್ಳಿ ಸಮೀಪ ಮಂಗಳವಾರ ಸಂಜೆ ನಡೆದಿದೆ.


ದುರ್ಗದಹಳ್ಳಿ ಗ್ರಾಮದ ಹಲಗಡ್ಕ ನಿವಾಸಿ ರಾಜೇಶ್ ಕಾಡುಕೋಣದಿಂದ ದಾಳಿಗೊಳಗಾದ ರೈತ. ಮಂಗಳವಾರ ಸಂಜೆ ತನ್ನ ಜಮೀನಿನಲ್ಲಿ ಇದ್ದಾಗ ಕಾಡುಕೋಣವೊಂದು ರಾಜೇಶ್ ಮೇಲೆ ದಾಳಿ ನಡೆಸಿದ್ದು, ಕಾಡುಕೋಣ ದಾಳಿಯಿಂದ ರಾಜೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾಡುಕೋಣದ ತಿವಿತದಿಂದ ರಾಜೇಶ್ ಅವರ ತಲೆ, ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ತೀವ್ರವಾಗ ಪೆಟ್ಟಾಗಿದೆ. ತಲೆ ಮತ್ತು ಹೊಟ್ಟೆ ಭಾಗದಲ್ಲಿ ಆಳವಾದ ಗಾಯಗಳಾಗಿವೆ.
ಕಾಡುಕೋಣ ರಾಜೇಶ್ ಅವರನ್ನು ತನ್ನ ಕೊಂಬಿನ ಮೇಲಿರಿಸಿ ಸುಮಾರು ದೂರ ಎಳೆದೊಯ್ದಿತ್ತು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ರಾಜೇಶ್ ಅವರನ್ನು ಸ್ಥಳೀಯರು ಕಳಸ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಯ ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಅಲ್ಲಿ  ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ಕಳೆದ ಕೆಲ ದಿನಗಳ ಹಿಂದೆ ಜಾವಳಿ ಸಮೀಪದ ಮೂವರ ಮೇಲೆ ಕಾಡುಕೋಣಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಕಾಡುಕೋಣಗಳ ಹಾವಳಿಯಿಂದಾಗಿ ಜನರು ಕಾರ್ಮಿಕರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು