ಇತ್ತೀಚಿನ ಸುದ್ದಿ
ಜ. 5: ಮಂಗಳೂರು ಧರ್ಮ ಪ್ರಾಂತ್ಯದ ಪರಮ ಪವಿತ್ರ ಪ್ರಸಾದ ಮೆರವಣಿಗೆ; ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವ
03/01/2025, 20:42
ಮಂಗಳೂರು(reporterkarnataka.com): ಮಂಗಳೂರು ಧರ್ಮ ಪ್ರಾಂತ್ಯದ ಪರಮ ಪವಿತ್ರ ಪ್ರಸಾದ ಮೆರವಣಿಗೆಯು ಜನವರಿ 5 ರಂದು ಸಂಜೆ ನಡೆಯಲಿದೆ. ಅಪರಾಹ್ನ 3.30ಕ್ಕೆ ಮಿಲಾಗ್ರಿಸ್ ಚರ್ಚ್ ನಲ್ಲಿ ಬಲಿಪೂಜೆ ನಡೆದು ಬಳಿಕ ಅಲ್ಲಿಂದ ಪರಮ ಪವಿತ್ರ ಪ್ರಸಾದ ಮೆರವಣಿಗೆ ರೊಜಾರಿಯೊ ಕ್ಯಾಥೆಡ್ರಲ್ ಗೆ ತೆರಳಲಿದೆ. ರೊಜಾರಿಯೊ ಕ್ಯಾಥೆಡ್ರಲ್ ನ ತೆರೆದ ಮೈದಾನದಲ್ಲಿ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಪರಮ ಪವಿತ್ರ ಪ್ರಸಾದದ ಆರಾಧನೆ,ಪ್ರವಚನ ಹಾಗೂ ಆಶೀರ್ವಚನ ನೆರವೇರಲಿದೆ ಎಂದು ಧರ್ಮ ಪ್ರಾಂತ್ಯದ ಪ್ರಕಟಣೆ ತಿಳಿಸಿದೆ.