ಇತ್ತೀಚಿನ ಸುದ್ದಿ
ಜೂ.3ರಂದು ವಿಶ್ವ ಬೈಸಿಕಲ್ ದಿನ ಆಚರಣೆ ; ಮಂಗಳೂರಿನಿಂದ ಉಳ್ಳಾಲದವರೆಗೆ ಸೈಕಲ್ ರ‌್ಯಾಲಿ
02/06/2022, 18:57

ಮಂಗಳೂರು (Reporterkarnataka.com) ಮಂಗಳೂರು ನೆಹರು ಯುವ ಕೇಂದ್ರದ ವತಿಯಿಂದ ದಕ್ಷಿಣ ಜಿಲ್ಲಾಡಳಿತದ ಸಹಯೋಗದೊಂದಿಗೆ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯೆನಪೊಯ ವಿಶ್ವವಿದ್ಯಾನಿಲಯ, ಎನ್.ಸಿ.ಸಿ, ಮಂಗಳೂರು ಸೈಕಲಿಂಗ್ ಕ್ಲಬ್ ಹಾಗೂ ಇತರೆ ಸಂಘಗಳ ಸಹಕಾರದೊಂದಿಗೆ ವಿಶ್ವ ಬೈಸಿಕಲ್ ದಿನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.3 ರಂದು ಆಚರಿಸಲಾಗುವುದು ಎಂದು ನೆಹರೂ ಯುವ ಕೇಂದ್ರದ ವಿಷ್ಣು ಮೂರ್ತಿ ತಿಳಿಸಿದ್ದಾರೆ.
ಅವರು ಗುರುವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸುಮಾರು 12 ಕಿಲೋಮೀಟರ್ ಸೈಕಲ್
ರ‌್ಯಾಲಿ.ಜಿಲ್ಲಾಧಿಕಾರಿಯವರ ಕಛೇರಿಯಿಂದ ಮಂಗಳಾದೇವಿ-ಮುಗೇರು-ಕಲ್ಲಾಪು-ತೊಕ್ಕೊಟ್ಟು ಮಾಸಿಕಟ್ಟೆಯಿಂದ ರಾಣಿ ಅಬ್ಬಕ್ಕ ವೃತ್ತ ಉಳ್ಳಾಲ ಇಲ್ಲಿ ಸಮಾಪನಗೊಳ್ಳುವುದು.
ರ‌್ಯಾಲಿಗೆ ಶಾಸಕ ಡಿ.ವೇದವ್ಯಾಸ ಕಾಮತ್ ಚಾಲನೆ ನೀಡಲಿದ್ದಾರೆ.ಹಾಗೂ ಸಮಾರೋಪ ಸಮಾರಂಭದಲ್ಲಿ ಶಾಸಕ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮವು ಉಳ್ಳಾಲ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿರುವುದು. ಎಂದು ಮಾಹಿತಿಯನ್ನು ನೀಡಿದರು.
ಗೋಷ್ಠಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ, ನೆಹರು ಯುವ ಕೇಂದ್ರದ ಜಗದೀಶ್, ಮಂಗಳೂರು ಸೈಕ್ಲಿಂಗ್ ಕ್ಲಬ್‌ನ ಅನೀಲ್ ಶೇಟ್ ಉಪಸ್ಥಿತರಿದ್ದರು.