1:57 AM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ಜೀರ್ಣೋದ್ಧಾರಗೊಂಡ ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ, ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ, ರಂಗ ಮಂದಿರ ಉದ್ಘಾಟನೆ

07/12/2024, 15:20

ಚಿತ್ರಾಪುರ(reporterkarnataka.com): ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ ಹಾಗೂ ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ, ರಂಗ ಮಂದಿರದ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆದ ಶಾಸಕ ಡಾ.ಭರತ್ ಶೆಟ್ಟಿ ವೈ. ಅವರು ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಿದರು.
ಚಿತ್ರಾಪುರ ಮಠಾಧೀಶರಾದ ಶ್ರೀ ವಿಧ್ಯೇoದ್ರ ತೀರ್ಥ ಶ್ರೀಪಾದ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೆರವೇರಿಸಿದರು.


ದ.ಕ. ಮಹಾಜನ ಸಂಘದ ಮಾಜಿ ಅಧ್ಯಕ್ಷ ಗಂಗಾಧರ್ ಹೊಸಬೆಟ್ಟು, ತಣ್ಣೀರುಬಾವಿ ಮೊಗವೀರ ಮಹಾಸಭಾ ದ ಅಧ್ಯಕ್ಷ ಲೀಲಾಧರ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಗಿರೀಶ್ ಕರ್ಕೇರ,ಕೋಶಾಧಿಕಾರಿ ಭುಜಂಗ ಕೋಟ್ಯಾನ್, ಹೊಸಬೆಟ್ಟು ಗ್ರಾಮದ ಅಧ್ಯಕ್ಷ ಯೋಗೀಶ್ ಕರ್ಕೇರ, ಕೂಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ಭರತ್ ಕುಮಾರ್,ಉಮೇಶ್ ಟಿ. ಕರ್ಕೇರ ಮತ್ಸ್ಯ ರಾಜ್ , ರಾಜೀವ್ ಕಾಂಚನ್,ಸುರೇಂದ್ರ ಬಂಗೇರ, ವಿಶ್ವನಾಥ್ ಕರ್ಕೇರ, ಶರತ್ ಬಂಗೇರ , ಮಾಧವ ಪುತ್ರನ್ ಮತ್ತಿತರ ಪ್ರಮುಖರು ಉಪ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು