ಇತ್ತೀಚಿನ ಸುದ್ದಿ
ಜಿಲ್ಲಾ ಪೊಲೀಸ್ ಗ್ರೌಂಡ್‌ನಲ್ಲಿ ಕ್ರಿಮಿನಲ್ ಗಳ ಪರೇಡ್ : ‘ಯಾಕಪ್ಪ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ದೀಯಾ’ ಅಂತ ಪ್ರಶ್ನಿಸಿದ ಪೊಲೀಸ್ ಕಮಿಷನರ್
06/07/2022, 19:25
ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಕ್ರಿಮಿನಲ್‌ಗಳ ಪರೇಡ್ ಇಂದು ನಗರದ ಜಿಲ್ಲಾ ಪೊಲೀಸ್ ಗ್ರೌಂಡ್‌ನಲ್ಲಿ ನಡೆಯಿತು.
275 ಕ್ರಿಮಿನಲ್‌ಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.ಇದರಲ್ಲಿ ರಾಜ್ಯಾದಾದ್ಯಂತ ಸುದ್ದಿ ಮಾಡಿದ್ದ ಡ್ರಗ್ ಪ್ರಕರಣದ ಆರೋಪಿ ಕಿಶೋರ್ ಅಮನ್ ಕಂಡು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಶರ್ಟ್ ಬಿಚ್ಚಿಸಿ ಆತನ ಕತ್ತಿನಲ್ಲಿದ್ದ ಹಾರ ಮತ್ತು ಎದೆಯ ಮೇಲಿದ್ದ ಟ್ಯಾಟೂ ನೊಡಿ ‘ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಿಶೋರ್ ಶೆಟ್ಟಿ, ತಾಯಿಯ ಟ್ಯಾಟೂ ಹಾಕಿರುವೆ ಎಂದಾಗ ‘ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ. ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಹೇಳಿದ ಅವರು ನೀನು ಡ್ರಗ್ಸ್ ತಿಂತೀಯಾ ಅಥವಾ ಬೇರೆಯವರಿಗೆ ತಿನ್ನಿಸೋದಷ್ಟೇನಾ ಎಂದು ಕ್ಲಾಸ್ ತೆಗೆದುಕೊಂಡರು. ಜೊತೆಗೆ ಕಳ್ಳತನ ಪ್ರಕರಣದ ಆರೋಪಿಗಳ ಬಳಿ ಐಫೋನ್‌ಗಳನ್ನು ಕಂಡು ಹಾಗೂ ಗೋಕಳ್ಳತನ ಆರೋಪಿಗಳ ಪರ್ಸ್‌ನಲ್ಲಿದ್ದ ಸಾವಿರಾರು ರೂಪಾಯಿ ನೋಟು ನೋಡಿ ದಂಗಾದರು.