2:38 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ಜೆಸಿಐ ಸುರತ್ಕಲ್ ನಿಂದ ಗೋವಿಂದ ದಾಸ ಪಿಯು ಕಾಲೇಜಿನಲ್ಲಿ ನವಗ್ರಹ ವನ ಉದ್ಘಾಟನೆ; ಕ್ಯೂ ಆರ್ ಕೊಡ್ ಅಳವಡಿಕೆ

22/09/2021, 08:47

ಸುರತ್ಕಲ್( reporterkarnataka.com): ಜೆಸಿಐ ಸುರತ್ಕಲ್ ಘಟಕದ ವತಿಯಿಂದ ಆಯೋಜಿಸಿದ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ರಾಖೀ ಜೈನ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಔಷಧೀಯ ಸಸ್ಯಗಳು ಉದ್ಯಾನ ಹಾಗೂ ನವಗ್ರಹ ವನದ ಉದ್ಘಾಟನಾ ಸಮಾರಂಭ ನಡೆಯಿತು.


ವನವನ್ನು ಉದ್ಘಾಟಿಸಿ ಜೇಸಿ ರಾಖೀ ಜೈನ್ ಅವರು ಜೆಸಿಐ ಸುರತ್ಕಲ್ ಹಾಗೂ ಕಾಲೇಜಿನ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಆರೋಗ್ಯದ ರಕ್ಷಣೆಗಾಗಿ ಔಷಧೀಯ ವನಗಳ ಪ್ರತಿ ಸಂಸ್ಥೆ, ಮನೆಗಳಲ್ಲಿ ಅತ್ಯಗತ್ಯ ಹಾಗೂ ನವಗ್ರಹ ವನದ ಯೋಜನೆಯ ಕುರಿತು ಶ್ಲಾಘಿಸಿದರು. 


ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷ ಜೇಸಿ ರಾಕೇಶ್ ಹೊಸಬೆಟ್ಟು ವಹಿಸಿದರು. ಜೆಸಿಐ ಭಾರತದ ವಲಯ ಹದಿನೈದರ ವಲಯಾಧ್ಯಕ್ಷ ಜೇಸಿ ಸೌಜನ್ಯ ಹೆಗ್ಡೆ, ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಹೊಸಬೆಟ್ಟು ಶ್ರೀರಂಗ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ವೈ.ವಿ.ರತ್ನಾಕರ ರಾವ್, ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಶುಭ ಹಾರೈಸಿದರು. 

ನವಗ್ರಹ ವನದ ಪ್ರತಿ ಸಸಿಗಳ ಫಲಕದಲ್ಲಿ ಕ್ಯೂ ಆರ್ ಕೊಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದಲ್ಲಿ ಆ ಸಸ್ಯದ ವಿಶೇಷತೆಗಳು ಸ್ಮಾರ್ಟ್ ಫೋನ್ ನಲ್ಲಿ ಲಾಭ್ಯವಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಸಸ್ಯಗಳ ಮಹತ್ವಗಳ ಬಗ್ಗೆ ಅರಿವು ಮಾಡಿಸಬಹುದು ಎಂದು ಅಧ್ಯಕ್ಷರು ತಿಳಿಸಿದರು.

ಯೋಜನೆಯ ಜವಾಬ್ದಾರಿ ವಹಿಸಿದ ಎಚ್.ವಿ.ಸಂಘದ ಎಂ.ಜಿ.ರಾಮಚಂದ್ರ, ವಿರಾಟ್ ಸಂಸ್ಥೆಯ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಸದಾನಂದ ಹಾಗೂ ವಿನ್ಯಾಸಕಾರ ಶಿವರಾಂ ಅಮೀನ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧಿಕಾರಿಗಳಾದ ಜೇಸಿ ಸತ್ಯನಾರಾಯಣ ಭಟ್, ಜೇಸಿ ಲೋಕೇಶ್ ರೈ, ಜೇಸಿ ಅಬ್ದುಲ್ ಜಬ್ಬಾರ್ ಸಾಹೇಬ್, ಜೇಸಿ ಆಶಾ ಅಲೆನ್, ಜೇಸಿ ದೀಪಕ್ ಗಂಗೂಲಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಚೇತನಾ ಬಿ.ಕೆ, ಪೈಕ ವೆಂಕಟರಮಣ ರಾವ್, ಪಲ್ಲವಿ ರಾಜೇಶ್, ಜಯಂತಿ ಅಮೀನ್, ಜಯಶ್ರೀ, ಜೆಸಿಐ ಸುರತ್ಕಲ್ ಘಟಕದ ಸದಸ್ಯರಾದ ಜೇಸಿ ಚೆನ್ನಕೇಶವ, ಜೇಸಿ ಗುಣವತಿ ರಮೇಶ್, ಜೇಸಿ ವಿನೀತ್ ಶೆಟ್ಟಿ, ಜೇಸಿ ಸುಜೀರ್ ಶೆಟ್ಟಿ, ಜೇಸಿ ರಾಜೇಶ್ವರಿ ಶೆಟ್ಟಿ, ಜೇಸಿ ಜಯರಾಜ್ ಆಚಾರ್ಯ, ಜೇಸಿ ಜ್ಯೋತಿ ಪಿ ಶೆಟ್ಟಿ, ಜೇಸಿ ಭಾರತಿ, ಜೇಸಿ ಜ್ಯೋತಿ ಜೆ ಶೆಟ್ಟಿ,ಜೇಸಿ ಶಶಿಕುಮಾರ್ ಶೆಟ್ಟಿ, ಘಟಕದ ಯುವ ಜೇಸಿ ಸದಸ್ಯೆ ಜೇಜೆಸಿ ಹಿತಾ ಉಮೇಶ್ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಜೇಸಿ ನಿತೇಶ್ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು