ಇತ್ತೀಚಿನ ಸುದ್ದಿ
ಜಯಪುರ: ಮೇಗುಂದ ಹೋಬಳಿಯಲ್ಲಿ ಮಳೆಯ ಅಬ್ಬರ: ಮರ ಬಿದ್ದು 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಹಿ
26/07/2025, 22:38

ಶಶಿ ಬೆತ್ತದಕೊಳಲು ಜಯಪುರ ಚಿಕ್ಕಮಗಳೂರು
info.reporterkarnataka@gmail.com
ಜಯಪುರ ಸಮೀಪದ ಮೇಗುಂದ ಹೋಬಳಿಯಲ್ಲಿ ಭಾರೀ ಮಳೆ ಗಾಳಿಗೆ ಹಲವೆಡೆ ಬೃಹತ್ತಾಕಾರದ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ಸುಮಾರು 50ಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿದ್ದು ಎರಡು ದಿನದಿಂದ ಕರೆಂಟ್ ಇಲ್ಲದಂತಾಗಿದೆ.
ಮಳೆಯ ಅಬ್ಬರದ ನಡುವೆಯೂ ಸರಿಪಡಿಸುತ್ತಿದ್ದು ಒಂದೆಡೆ ಸರಿಯಾದರೆ ಮತ್ತೊಂದೆಡೆ ಮರ ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಕಷ್ಟವಾಗುತ್ತಿದೆ.
ಭಾರೀ ಮಳೆ ಗಾಳಿಗೆ ವಿದ್ಯುತ್ ತಂತಿಗಳ ಮೇಲೆ ಮರಗಳು ಬೀಳುತ್ತಿದ್ದು ಇದನ್ನು ಪುನಃ ಸ್ಥಾಪಿಸಲು ಭಾರೀ ಮಳೆ ಗಾಳಿಯು ಅಡ್ಡಿಯಾಗುತ್ತಿದೆ.
ನಮ್ಮಲ್ಲಿ ಸಿಬ್ಬಂದಿಗಳು ಕೂಡ ಕಡಿಮೆ ಇದ್ದರೂ ಮಳೆ ಗಾಳಿ ಲೆಕ್ಕಿಸದೆ ಹರಸಾಹಸ ಪಟ್ಟು ಜಯಪುರದವರೆಗೂ ಸರಿಪಡಿಸಿದ್ದೇವೆ.
ಗ್ರಾಮೀಣ ಭಾಗಗಳಿಗೆ ಇಂದು ವಿದ್ಯುತ್ ಸಂಪರ್ಕಿಸುವುದು ಕಷ್ಟವಾಗಿದ್ದು ಗ್ರಾಹಕರು ಸಹಕರಿಸಬೇಕಾಗಿ ಕೋರಿಕೊಳ್ಳುತ್ತೇನೆ ಎಂದು
ಜಯಪುರ ಸಹಾಯಕ ಇಂಜಿನಿಯರ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.