ಇತ್ತೀಚಿನ ಸುದ್ದಿ
ಜಯಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ತಪ್ಪಿಸಿದ್ರ ತಾಪಂ ಇಓ?: ಗ್ರಾಪಂ ಮಾಡಿದ ಆರೋಪಗಳೇನು?; ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ
30/09/2024, 21:09

ಶಶಿ ಬೆತ್ತದಕೊಳಲು ಕೊಪ್ಪ
info.reporterkarnataka@gmail.com
2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಸರ್ಕಾರ ಆದೇಶ ಮಾಡಿದ ಕಾರಣದಿಂದ ಜಯಪುರ ಗ್ರಾಮ ಪಂಚಾಯಿತಿಗೆ ದಾಖಲೆ ಪರಿಶೀಲನೆಗೆ ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿತ್ತು.
20/9/2024 ರಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ.
ಆದರೆ ಸರ್ಕಾರದಿಂದ ಬಂದಿದ್ದ 134 ಪ್ರಶ್ನೆಗಳಿಗೆ ಸುಮಾರು 500 ಅಂಕಗಳು ಇರುತ್ತವೆ.
ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ಕೇವಲ 10 ರಿಂದ15 ನಿಮಿಷದಲ್ಲಿ ಪರಿಶೀಲನೆ ಮಾಡಿದ್ದಾರೆ.
ಜಯಪುರ ಗ್ರಾಮ ಪಂಚಾಯತಿ ಯಲ್ಲಿ ದಾಖಲೆಗಳು ಸರಿಯಾಗಿ ಇದ್ದರು ಅವರು ಸರಿಯಾಗಿ ಪರಿಶೀಲನೆ ಮಾಡದೆ ಕಾಟಚಾರಕ್ಕೆ ಪರಿಶೀಲನೆ ಮಾಡಿ ಹೋಗಿ ಜಯಪುರ ಗ್ರಾಮ ಪಂಚಾಯಿತಿಗೆ ಸಿಗಬೇಕಿದ್ದ ಗಾಂಧಿ ಗ್ರಾಮ ಪುರಸ್ಕಾರವನ್ನು ತಪ್ಪಿಸಿದ್ದಾರೆ ಎಂದು ಜಯಪುರ ಗ್ರಾಮ ಪಂಚಾಯತಿ ಅವರು ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಅಕ್ರೋಶ ಹೊರಹಾಕಿದ್ದಾರೆ.
ಪರಿಶೀಲನೆ ಮಾಡಿ ನಮಗೆ ಮೊದಲು 401 ಅಂಕಗಳನ್ನು ನೀಡಿ ನಮ್ಮನ್ನು ಆಯ್ಕೆ ಮಾಡಿದ್ದರು.
ಈಗ ಮತ್ತೆ 328 ಅಂಕಗಳನ್ನು ನೀಡಿ ಸುಮಾರು 73 ಅಂಕಗಳನ್ನು ಕಡಿಮೆ ಮಾಡಿ ನಮಗೆ ಪ್ರಶಸ್ತಿಯನ್ನು ತಪ್ಪಿಸಿದ್ದಾರೆ.
ನಮಗೆ 401 ಅಂಕಗಳು ಮೊದಲು ಕೊಟ್ಟು ಈಗ 73 ಅಂಕ ಕಡಿಮೆ ಮಾಡಿ 328 ಅಂಕ ಮಾಡಿದ್ಯಾಕೆ?.ನಮಗೆ 73 ಅಂಕಗಳು ಕಡಿಮೆ ಹೇಗೆ ಆಯ್ತು?.ನಮಗೆ ಮಾಹಿತಿ ನೀಡಬೇಕು ಎಂಬುದು ಜಯಪುರ ಗ್ರಾಮ ಪಂಚಾಯತಿ ಅವರ ಬೇಡಿಕೆ.